ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ: ಕೊನೆಯ ದಿನಾಂಕ ಸೆ.೨೨ಕ್ಕೆ ವಿಸ್ತರಣೆ

0

ಸುಳ್ಯ ತಾಲೂಕಿನ ಕೆಳಕಂಡ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ I, IIಎ, IIಬಿ, IIIಎ, IIIಬಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ (ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳು) 2022-23ನೇ ಸಾಲಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು, ಕೊನೆಯ ದಿನಾಂಕ ಸೆ.19ರ ಬದಲು ಸೆ.22ಕ್ಕೆ ವಿಸ್ತರಣೆ ಮಾಡಿ ಇಲಾಖೆ ಆದೇಶ ಹೊರಡಿಸಿದೆ.

ವಿದ್ಯಾರ್ಥಿನಿಲಯಗಳ ವಿವರ :
1. ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ,ಉನ್ನತೀಕರಿಸಿದ,ಸುಳ್ಯ BCWD 456
2. ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ಸುಳ್ಯ BCWD 1888
3. ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಸುಳ್ಯ BCWD 1890
4. ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ವಿಭಜನೆ BCWD 1891
5. ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ,ಕೊಡಿಯಾಲಬೈಲ್, ಸುಳ್ಯ BCWD1893
6. ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಬೆಳ್ಳಾರೆ BCWD 1892
7. ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಸುಬ್ರಹ್ಮಣ್ಯ BCWD 1889

ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ:
ಪ್ರವರ್ಗ -I, ಪ.ಜಾತಿ , ಪ.ಪಂಗಡ : ರೂ. 2.50 ಲಕ್ಷ
ಪ್ರವರ್ಗ IIಎ, IIಬಿ, IIIಎ, IIIಬಿ, ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ : ರೂ. 1.00 ಲಕ್ಷ
ಅರ್ಜಿಯನ್ನು ಸಲ್ಲಿಸುವ ವಿಧಾನ :
1. ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ www.bcwd.karnataka.gov.in  ನಲ್ಲಿ ಸಲ್ಲಿಸಬೇಕು.
2. ಕಂದಾಯ ಇಲಾಖೆಯಿಂದ ನೀಡಲಾಗುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
3. ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಂದ ಪ್ರವೇಶ ದೃಡೀಕರಣ ಪತ್ರ ಅಥವಾ ಶುಲ್ಕ ಪಾವತಿಸಿರುವ ರಶೀದಿ.
4. ವಿದ್ಯಾರ್ಥಿಯ ಆಧಾರ್ ಮತ್ತು ಬ್ಯಾಂಕ್ ವಿವರಗಳನ್ನು ಕಡ್ಡಾಯವಾಗಿ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸುವುದು.
5. ಹಿಂದಿನ ತರಗತಿಯಲ್ಲಿ ತೇರ್ಗಡೆಯಾದ ಅಂಕಪಟ್ಟಿಯ ಧೃಡೀಕೃತ ಪ್ರತಿ.
6. ವಿದ್ಯಾರ್ಥಿಯು ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಆಯಾ ತಾಲೂಕಿನಲ್ಲಿರುವ ವಿದ್ಯಾರ್ಥಿನಿಲಯಗಳಲ್ಲಿ ಕನಿಷ್ಠ ನಾಲ್ಕು ವಿದ್ಯಾರ್ಥಿನಿಲಯಗಳಿಗೆ ಕಡ್ಡಾಯವಾಗಿ ಆಧ್ಯತೆಯನ್ನು ನೀಡತಕ್ಕದ್ದು (ಉದಾ: ಆಯಾ ತಾಲೂಕಿನಲ್ಲಿ ನಾಲ್ಕಕ್ಕಿಂತ ಹೆಚ್ಚಿನ ವಿದ್ಯಾರ್ಥಿನಿಲಯಗಳಿದ್ದಲ್ಲಿ ಕಡ್ಡಾಯವಾಗಿ ಕನಿಷ್ಠ ನಾಲ್ಕು ವಿದ್ಯಾರ್ಥಿನಿಲಯಗಳಿಗೆ ಆಧ್ಯತೆಯನ್ನು ನೀಡುವುದು, ಒಂದು ವೇಳೆ ನಾಲ್ಕಕ್ಕಿಂತ ಕಡಿಮೆ ಇದ್ದಲ್ಲಿ, ತಾಲೂಕಿನಲ್ಲಿ ಇರುವಂತಹ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಆಧ್ಯತೆಯನ್ನು ಕಡ್ಡಾಯವಾಗಿ ನೀಡುವುದು.) ನಾಲ್ಕಕ್ಕಿಂತ ಹೆಚ್ಚು ವಿದ್ಯಾರ್ಥಿ ನಿಲಯಗಳು ತಾಲ್ಲೂಕಿನಲ್ಲಿದ್ದಲ್ಲಿ ವಿದ್ಯಾರ್ಥಿಯು ಆ ವಿದ್ಯಾರ್ಥಿನಿಲಯ ಸೇರಲು ಆಸಕ್ತಿ ಇದ್ದಲ್ಲಿ 4 ಕ್ಕಿಂತ ಹೆಚ್ಚು ವಿದ್ಯಾರ್ಥಿನಿಲಯಗಳನ್ನು ಆಯ್ಕೆಗೆ ನಮೂದಿಸುವುದು. ವಿದ್ಯಾರ್ಥಿಯು ಆಯ್ಕೆಯಾಗುವ ವಿದ್ಯಾರ್ಥಿನಿಲಯಕ್ಕೆ ಒಂದು ವೇಳೆ ಪ್ರವೇಶ ನಿರಾಕರಿಸಿದಲ್ಲಿ, ಅಂತಹ ವಿದ್ಯಾರ್ಥಿಗಳು ವಿದ್ಯಾಸಿರಿ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲು ಅರ್ಹರಿರುವುದಿಲ್ಲ.
7  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22.೦9.2022

ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯವರ ಕಛೇರಿ, ಕೊಡಿಯಾಲ್‌ಬೈಲ್ ಸುಳ್ಯ ಇವರನ್ನು ಸಂಪರ್ಕಿಸಬಹುದು, ದೂರವಾಣಿ ಸಂಖ್ಯೆ :

08257-295659.

ವಿ.ಸೂ: ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಊಟ, ವಸತಿ, ಹಾಸಿಗೆ, ಹೊದಿಕೆ, ಎಣ್ಣೆ, ಸೋಪು, ಪೇಸ್ಟ್, ಇತ್ಯಾದಿಗಳನ್ನು ಉಚಿತವಾಗಿ ನೀಡಲಾಗುತ್ತದೆ.