ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ಹಾಗೂ ರಿನೀವಲ್ ವಿಶೇಷ ಕ್ಯಾಂಪ್

0

 

ಈ ಕ್ಯಾಂಪ್ ವಿಕಲಚೇತನ ಇಲಾಖೆ

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲ್ಲೂಕಿನ ವಿಕಲ ಚೇತನರಿಗೆ ಗುರುತಿನ ಚೀಟಿ ನೀಡುವ ರಿನೀವಲ್ ಮಾಡುವ ವಿಶೇಷ ಕ್ಯಾಂಪ್ ಸೆ .13ರಂದು ನಡೆಯಿತು.

ಈ ಕ್ಯಾಂಪ್ ವಿಕಲಚೇತನ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಂಟಿಯಾಗಿ ನಡೆಯಿತು.

ತಾಲ್ಲೂಕು ಪಂಚಾಯತ್ ನ ವಿಕಲಚೇತನರ ಇಲಾಖೆಯ ಸಂಯೋಜಕ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನ ಇಲಾಖೆಯ ಮೇಲ್ವಿಚಾರಕರಾದ ಪ್ರವೀಣ್ ನಾಯಕ್, ತಾಲ್ಲೂಕಿನ ಇತರ ಪಂಚಾಯತ್ ಗಳ ಇಲಾಖೆಯ ಮೇಲ್ವಿಚಾರಕ, ವಿ ರ್ ಡಬ್ಲ್ಯೂ ರವರಾದ ಕೃಷ್ಣ ಪ್ರಸಾದ್ ಬಾಳಿಲ,ಷಣ್ಮುಖ,ಪುಷ್ಪಶ್ರೀ,ಹರಿಣಿ, ಆಶೀಶ್, ದಿನೇಶ, ವಿಶ್ವನಾಥ, ಮೀನಾಕ್ಷಿ ಮತ್ತು ಆರೋಗ್ಯ ಇಲಾಖೆಯ ಚಂದ್ರಪ್ಪ ಮತ್ತು ದಾದಿ ನಯನ ಮತ್ತು ಇತರರು ಉಪಸ್ಥಿತರಿದ್ದರು.
ವೈದ್ಯಾಧಿಕಾರಿ ಡಾ. ಕರುಣಾಕರ್ ನೇತೃತ್ವದಲ್ಲಿ ತಜ್ಞ ವೈದ್ಯರು ಸಹಕಾರ ನೀಡಿದರು. ಹಲವಾರು ಜನ ವಿಶೇಷ ಚೇತನರು ಇದರ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here