ಮಿತ್ತಡ್ಕ ಮರ್ಕಂಜ ಶಾಲಾ ಅಭಿವೃದ್ಧಿಗೆ ಅನುದಾನಕ್ಕಾಗಿ ಶಿಕ್ಷಣ ಸಚಿವರಿಗೆ ಮನವಿ

0

 

 

 

ಶತಮಾನದ ಹೊಸ್ತಿಲಿನಲ್ಲಿರುವ ಮರ್ಕಂಜ ಗ್ರಾಮದ ಮಿತ್ತಡ್ಕ ಮರ್ಕಂಜ ಶಾಲಾ‌ ಅಭಿವೃದ್ಧಿಗೆ ರೂ.50 ಲಕ್ಷ ಅನುದಾನ ಒದಗಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ರಿಗೆ ಶಾಲಾ ಪೋಷಕ ಪ್ರತಿನಿಧಿ ಜಗನ್ನಾಥ ಜಯನಗರ ಮನವಿ ಸಲ್ಲಿಸಿದ್ದಾರೆ.

 

ಬೆಂಗಳೂರು ವಿಧಾನಸೌಧದಲ್ಲಿ ಜಗನ್ನಾಥ ಅವರು ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಶಾಲಾ ಅಭಿವೃದ್ಧಿಗೆ ಅನುದಾನ ಮಂಜೂರುಗೊಳಿಸಲು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿರುವ ಶಿಕ್ಷಣ ಸಚಿವರು ಶಾಲೆಯ ಮಾಹಿತಿ ಕೇಳಿದರಲ್ಲದೆ, ಫೂರಕವಾಗಿ ಸ್ಪಂದನ ನೀಡಿದ್ದಾರೆ ಎಂದು ಜಗನ್ನಾಥ ರು ಸುದ್ದಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here