ನಾಳೆ  ಸುಳ್ಯದಲ್ಲಿ ಇಂಜಿನಿಯರ್ಸ್ ದಿನಾಚರಣೆ

0

 

ಸುಳ್ಯ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಇದರ ಆಶ್ರಯದಲ್ಲಿ ನಾಳೆ (ಸೆ.15) ರಂದು ಸುಳ್ಯ ಅಂಬಟೆಡ್ಕ ದಲ್ಲಿರುವ ವರ್ತಕರ ಭವನದಲ್ಲಿ ಇಂಜಿನಿಯರ್ಸ್ ದಿನಾಚರಣೆಯು ನಡೆಯಲಿದೆ.
ಸಂಜೆ 6.00 ಗಂಟೆಗೆ ಸಮಾರಂಭವು ಅಸೋಸಿಯೇಷನ್ ಅಧ್ಯಕ್ಷ ಇಂಜಿನಿಯರ್ ಪ್ರಸಾದ್ ಎಂ.ಎಸ್.ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಮುಖ್ಯ ಅತಿಥಿಗಳಾಗಿ ಇಂಜಿನಿಯರ್ ಸಣ್ಣೇ ಗೌಡ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ನಿವೃತ್ತ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಂಕಪ್ಪ ಗೌಡ ರವರನ್ನು ಸನ್ಮಾನಿಸಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷರು ತಿಳಿಸಿರುತ್ತಾರೆ.