ಸಾಧಕರಿಗೆ ಸನ್ಮಾನ- ವಿವಿಧ ಸ್ಪರ್ಧೆಗಳು- ಆಕರ್ಷಕ ಪೂಕಳಂ, ತಿರುವಾದಿರ ನೃತ್ಯ ಪ್ರದರ್ಶನ
ಭಾರತೀಯ ತೀಯ ಸಮಾಜ ಸುಳ್ಯ ವಲಯದ ವಿವಿಧ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸೆ.11 ರಂದು ಸುಳ್ಯದ ಶಿವ ಕೃಪಾ ಕಲಾ ಮಂದಿರದಲ್ಲಿ ಓಣಂ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾರತೀಯ ತೀಯ ಸಮಾಜದ ತಾಲೂಕು ಅಧ್ಯಕ್ಷ ಪವಿತ್ರನ್ ಗುಂಡ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ಕೇಂದ್ರ ಸಮಿತಿ ಅಧ್ಯಕ್ಷ ನ್ಯಾಯವಾದಿ ಸದಾಶಿವ ಉಳ್ಳಾಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾರುಣ್ಯ ನಿಧಿ ಮತ್ತು ವಿದ್ಯಾನಿಧಿ ಎಂಬ ಎರಡು ಉನ್ನತ ಯೋಜನೆಯ ಮನವಿ ಕರಪತ್ರವನ್ನು ಬಿಡುಗಡೆಗೊಳಿಸಿದರು. ಓಣಂ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ನಗರ ಸಮಿತಿ ಅಧ್ಯಕ್ಷ ಸುರೇಶ್ ಕುತ್ತಮೊಟ್ಟೆ, ವಲಯ ಸಮಿತಿ ಕಾರ್ಯದರ್ಶಿ ರಾಜೇಶ್ ಕುತ್ತಮೊಟ್ಟೆ, ಕೋಶಾಧಿಕಾರಿ ಸುನಿಲ್ ಪರಿವಾರಕಾನ ಉಪಸ್ಥಿತರಿದ್ದರು. ಹಬ್ಬದ ಪ್ರಯುಕ್ತ ವಿಶೇಷವಾಗಿ ಹೂವಿನಲ್ಲಿ ಪೂಕಳಂ ಹಾಕಲಾಗಿತ್ತು.
ಬಳಿಕ ಮಕ್ಕಳಿಗೆ ,ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ಹಾಗೂ ಆಕರ್ಷಕ ಕೇರಳದ ಸಾಂಪ್ರಾದಾಯಿಕ ಉಡುಪು ಧರಿಸಿದ ಮಹಿಳೆಯರಿಂದ ತಿರುವಾದಿರ ನೃತ್ಯ ಪ್ರದರ್ಶನಗೊಂಡಿತು. ಮಧ್ಯಾಹ್ನ ವಿಶೇಷವಾಗಿ ಹಲವು ಬಗೆಯ ಓಣಂ ಸದ್ಯ ತಯಾರಿಸಲಾಗಿತ್ತು.
ಸಮಾರೋಪ ಸಮಾರಂಭ- ಬಹುಮಾನ ವಿತರಣೆ: ಸಮಿತಿಯ ಅಧ್ಯಕ್ಷ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅಭ್ಯಾಗತರಾಗಿ ವಲಯ ಸಮಿತಿ ಅಧ್ಯಕ್ಷ ರಧೀಶ್ ಬಾಬು ಬೇಡಗಂ ರವರು ಓಣಂ ಹಬ್ಬದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಜಾನಕಿ ಕುತ್ತಮೊಟ್ಟೆ ಮತ್ತು ನಿವೃತ್ತ ಎ.ಎಸ್.ಐ.ಭಾಸ್ಕರ ಅಡ್ಕಾರ್ ರವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಶ್ರೀಮತಿ ಅಂಬಿಕಾ ಕುಂಞರಾಮನ್ ರವರು ಉಪಸ್ಥಿತರಿದ್ದರು.
ಶ್ರೀಮತಿ ರೇಖಾಸಂದೀಪ್ ಪ್ರಾರ್ಥಿಸಿದರು. ಸುರೇಶ್ ಕುತ್ತಮೊಟ್ಟೆ ಸ್ವಾಗತಿಸಿ, ಭಾಸ್ಕರ ಅಡ್ಕಾರ್ ವಂದಿಸಿದರು. ನ್ಯಾಯವಾದಿ ನಾಗೇಶ್ ಅಡ್ಕಾರ್ ಮತ್ತು ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಭಾವತಿ ಕುತ್ತಮೊಟ್ಟೆ, ದಿವ್ಯಾ ಚಿತ್ತರಂಜನ್ ಹಳೆಗೇಟು, ಮಲ್ಲಿಕಾ ಅಜಿತ್ ಹಳೆಗೇಟು, ಯಶೋಧ ಕಲ್ಲುಗುಂಡಿ, ಗೋಪಾಲ ಅಡ್ಕಾರ್, ರವಿಚಂದ್ರ ಕೊಡಿಯಾಲಬೈಲು, ರಂಜಿತ್ ಗುಂಡ್ಯ, ಜಯಪ್ರಕಾಶ್ ಅರಂಬೂರು, ಆಶಾ ಭಾನುಪ್ರಕಾಶ್ ಅರಂತೋಡು, ಅಜಿತ್ ಜಿ. .ಕೆ ಹಳೆಗೇಟು, ಸುನಿಲ್ ಗುಂಡ್ಯ, ರಮ್ಯಾ ನಾಗಪಟ್ಟಣ, ಸ್ವಪ್ನಾ ಪವಿತ್ರನ್ ಗುಂಡ್ಯ ರವರು ನಿರ್ಣಾಯಕರಾಗಿ ಸಹಕರಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತವಾಗಿ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ನವೀಕರಣ ಕಾರ್ಯವನ್ನು ಮೇಲ್ವಿಚಾರಕಿ ರಮ್ಯಾ ಅರಂಬೂರು ನಡೆಸಿಕೊಟ್ಟರು. ಭಾರತೀಯ ತೀಯ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ಸುಮಾರು 500 ಕ್ಕೂ ಮಿಕ್ಕಿ ಸಮಾಜ ಬಾಂಧವರು ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.