ಕರಾವಳಿ ಮೀನುಗಾರಿಕೆ ಕೊಂಡಿರಸ್ತೆ ಅಭಿವೃದ್ಧಿ ಅನುದಾನ ಕ್ಕೆ ಸಚಿವ ಎಸ್ ಅಂಗಾರ ರಿಂದ ಮುಖ್ಯ ಮಂತ್ರಿಗಳಿಗೆ ಮನವಿ

0

ಕರಾವಳಿ ಪ್ರದೇಶದ ಮೀನುಗಾರಿಕೆ ಕೊಂಡಿರಸ್ತೆ ಅಭಿವೃದ್ಧಿ (ರೂ.79.22ಕೋಟಿ)ಮತ್ತು ಜನಸಂಚಾರಕ್ಕೆ 7 ಬಾರ್ಜುಗಳ ನಿರ್ಮಾಣಕ್ಕೆ (ರೂ.6.90 ಕೋಟಿ) ಅನುದಾನ ಬಿಡುಗಡೆಗೊಳಿಸಲು  ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಇಂದು ಕರಾವಳಿ ಭಾಗದ ಶಾಸಕರೊಂದಿಗೆ  ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮನವಿ ಸಲ್ಲಿಸಿದರು.