ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಬೆಳ್ಳಾರೆ ವಲಯಮಟ್ಟದ ಪ್ರತಿಭಾಕಾರಂಜಿ -189 ಸ್ಪರ್ಧಾಳುಗಳು ಭಾಗಿ

0

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಮತ್ತು ಪಯಸ್ವಿನಿ ಪ್ರೌಢ ಶಾಲೆ ಜಾಲ್ಸೂರು ಇದರ ಆಶ್ರಯದಲ್ಲಿ ಬೆಳ್ಳಾರೆ ವಲಯಮಟ್ಟದ ಪ್ರತಿಭಾಕಾರಂಜಿ ಸೆ.14 ರಂದು ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ನಡೆಯಿತು.


ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಕ್ಕಳು ಭೌತಿಕವಾಗಿ, ಸಾಂಸ್ಕೃತಿಕ ವಾಗಿ ಬೆಳೆಯಲು ಇಂತಹ ವೇದಿಕೆಗಳು ಸಹಕಾರಿ ಆಗುತ್ತದೆ. ಸ್ಪರ್ಧೆ ಗಳಲ್ಲಿ ನಿಷ್ಪಕ್ಷಪಾತ ವಾಗಿ ನಿರ್ಣಾಯಕರು ತೀರ್ಪು ನೀಡಬೇಕು ಎಂದರು.
ಪಯಸ್ವಿನಿ ಪ್ರೌಢಶಾಲಾ ಸಂಚಾಲಕ ಜಾಕೆ ಸದಾನಂದ ಮಾತನಾಡಿ, ಅವರಲ್ಲಿ ಇರುವ ಪ್ರತಿಬೆಗಳನ್ನು ಹುಡುಕಿ ಗುರುತಿಸುವ ಕೆಲಸ ಆಗಬೇಕು ಎಂದರು.
ಅಧ್ಯಕ್ಷತೆ ಯನ್ನು ವಹಿಸಿದ್ದ ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ದೇರಣ್ಣ ಗೌಡ ಮಾತನಾಡಿ, ಮಕ್ಕಳು ಇಂತಹ ವೇದಿಕೆಯಿಂದ ತಮ್ಮ ಪ್ರತಿಭೆಗಳನ್ನು ಹೊರಸೂಸಿ, ಮಹಾನ್ ವ್ಯಕ್ತಿ ಗಳಾದ ನಿದರ್ಶನ ಗಳು ಇವೆ. ಪ್ರತಿಭಾಕಾರಂಜಿ ಗಳು ಇಂದಿನ ಯುವಪೀಳಿಗೆ ಸ್ಪೂರ್ತಿ ದಾಯಕ ಎಂದರು.
ಪ್ರತಿಭಾಕಾರಂಜಿ ನೋಡೆಲ್ ಅಧಿಕಾರಿ ವಸಂತ ಏನೆಕಲ್ಲು ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಸಂಧ್ಯಾಕುಮಾರಿ, ನಳಿನಿ ಪುರುಷೋತ್ತಮ ಕಿರ್ಲಾಯ, ಸಿ.ಆರ್.ಪಿಗಳಾದ ಅನುರಾಧ, ಸವಿತಾಕುಮಾರಿ, ಮಮತ, ಬಿ.ಆರ್.ಪಿ ರಮ್ಯ ಇದ್ದರು.
ಪಯಸ್ವಿನಿ ಪ್ರೌಢ ಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ ಸ್ವಾಗತಿ, ಶಿಕ್ಷಕಿ ಜಯಲತಾ ಕೆ.ಆರ್ ವಂದಿಸಿದರು. ಶಿಕ್ಷಕರಾದ ಸವಿತ ಮತ್ತು ವೆಂಕಟಗಿರಿ ನಿರೂಪಿಸಿದರು. ಬೆಳ್ಳಾರೆ ವಲಯ ಮಟ್ಟದ ಒಟ್ಟು 12 ಶಾಲೆಗಳ 189 ಸ್ಪರ್ಧಾಳು ಭಾಗವಹಿದ್ದರು. ತಾಲೂಕಿನ ನುರಿತ ನಿರ್ಣಾಯಕ ರು ಭಾಗವಹಿಸಿದ್ದರು.