ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ತಾಲ್ಲೂಕು ಸಮಿತಿ ಅಸ್ತಿತ್ವಕ್ಕೆ

0

 

ಮಹಿಳೆಯರಲ್ಲಿ ದೇಶಭಕ್ತಿ, ಮಹಿಳೆ ಹಾಗೂ ಮಕ್ಕಳ ರಕ್ಷಣೆ ಹಾಗೂ ಸಾಮಾಜಿಕ ಬದ್ಧತೆ ಹಾಗೂ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ಸುಳ್ಯದಲ್ಲಿ ಸಂಘಟನೆಗಳ ನಿರ್ದೇಶನದಲ್ಲಿ ನೂತನವಾಗಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಆರಂಭಗೊಂಡಿದೆ.

ಶ್ರೀಮತಿ ವೇದಾವತಿ ಎಸ್. ಅಂಗಾರ ಟ್ರಸ್ಟ್ ನ ಪದಗ್ರಹಣ ಸಮಾರಂಭವನ್ನು ಉಧ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲೆ ರಮಾ ವೈ‌.ಕೆ. ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಕೆ. ಎಂ. ಭಾಗವಹಿಸಿದ್ದರು.

ತಾಲೂಕು ಮಟ್ಟದ ಈ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಇಂದಿರಾ ರಾಜಶೇಖರ ರೈ, ಕಾರ್ಯದರ್ಶಿಯಾಗಿ ಗುಣವತಿ ಕೊಲ್ಲಂತಡ್ಕ, ಉಪಾಧ್ಯಕ್ಷರಾಗಿ ಶಶಿಕಲಾ ಹರಪ್ರಸಾದ್, ಖಜಾಂಚಿಯಾಗಿ ಜಯಂತಿ ಜನಾರ್ದನ್, ಜತೆ ಕಾರ್ಯದರ್ಶಿಯಾಗಿ ಜಾಹ್ನವಿ ಕಾಂಚೋಡು, ನಿರ್ದೇಶಕರಾಗಿ ಪುಷ್ಪಾ ಮೇದಪ್ಪ, ಶಾರದಾ ಡಿ. ಶೆಟ್ಟಿ, ರಾಜೀವಿ ಲಾವಂತಡ್ಕ, ಮಮತಾ ಬೊಳುಗಲ್ಲು, ಸರಸ್ವತಿ ಕಕ್ಕಾಡು, ಚಂದ್ರಾ ಹೊನ್ನಪ್ಪ, ಯಶೋದಾ ಬಾಳೆಗುಡ್ಡೆ, ಶಶಿಕಲಾ ದುಗಲಡ್ಕ, ಸವಿತಾ ಕಾಯರ, ಲೋಲಾಕ್ಷಿ ದಾಸನಕಜೆ, ದಿವ್ಯಾ ಚೊಕ್ಕಾಡಿ ಇವರು ಆಯ್ಕೆಯಾದರು.