ಜೇಸಿಐ ಸುಳ್ಯ ಪಯಸ್ವಿನಿ ಜೇಸಿಐ ಸಪ್ತಾಹ ಎಲಿಮಲೆಯಲ್ಲಿ ಮಾಹಿತಿ ಕಾರ್ಯಕ್ರಮ

0

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ,ಎಲಿಮಲೆಯಲ್ಲಿ ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ತಪಾಸಣೆ ಹಮ್ಮಿಕೊಳ್ಳಲಾಯಿತು.

ಮಾಹಿತಿ ಕಾರ್ಯಾಗಾರವನ್ನು ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಫ್ರೋಫೆಸರ್ ಡಾ.ವಿಜಯಲಕ್ಷ್ಮಿ ನಡೆಸಿಕೊಟ್ಟರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಜೇಸಿ ರಂಜಿತ್ ಕುಕ್ಕೆಟ್ಟಿ ವಹಿಸಿದ್ದರು.
ಸಭಾ ಕಾರ್ಯಕ್ರಮದ ಉದ್ಘಾಟನೆ ನಮ್ಮ ಘಟಕದ ಪೂರ್ವಾದ್ಯಕ್ಷ ಜೇಸಿ ಹೆಚ್ ಜಿ ಎಫ್ ಭರತ್ ಮುಂಡೋಡಿಯವರು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಶ್ರೀಮತಿ ಸತ್ಯಭಾಮ, ಘಟಕದ ಪೂರ್ವಾದ್ಯಕ್ಷರಾದ , ಜೇಸಿ ಹೆಚ್ ಜೆ ಎಫ್ ಎಂ ದೇವರಾಜ್ ಕುದ್ಪಾಜೆ, ನಿಕಟಪೂರ್ವ ಅಧ್ಯಕ್ಷ ಜೇಸಿ ಗುರುರಾಜ್ ಅಜ್ಜಾವರ, ಲೇಡಿ ಜೇಸಿ ಸಂಯೋಜಕಿ ಜೇಸಿ ರಮ್ಯ ರಂಜಿತ್ ಕುಕ್ಕೆಟ್ಟಿ, ಯೋಜನಾ ನಿರ್ದೇಶಕಿ ಜೇಸಿ ಸುನಿತಾ ರವಿಕುಮಾರ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಜೇಸಿ ನವೀನ್ ಕುಮಾರ್ ವಂದಿಸಿದರು.