ಸಂಪಾಜೆ ಗ್ರಾ.ಪಂ. ನಲ್ಲಿ ಜಮಾಬಂದಿ

0

 

 

ಸಂಪಾಜೆ ಗ್ರಾಮ ಪಂಚಾಯತ್ ಜಮಾಬಂದಿ ಕಾರ್ಯಕ್ರಮ ಸಂಪಾಜೆ ಗ್ರಾಮ ಪಂಚಾಯತ್ ನ 2020-21 ನೇ ಸಾಲಿನ ಜಮಾಬಂಧಿ ಕಾರ್ಯಕ್ರಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

 

ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸರ್ವರನ್ನು ಸ್ವಾಗತಿಸಿದರು. ಗೋಪಮ್ಮ ವರದಿ ವಾಚಿಸಿದರು. ನೋಡೆಲ್ ಅದಿಕಾರಿ ಯಾಗಿ ಅಕ್ಷರ ದಶೋಹ ಶಿಕ್ಷಣ ಇಲಾಖೆ ಮಂಗಳೂರು ಇವರು ಭಾಗವಹಿಸಿ ಜಮಾಬಂಧಿ ನಡೆಸಿಕೊಟ್ಟರು. ದರ್ಕಾಸ್ ಹಾಗೂ ಕೆಲವು ರಸ್ತೆಗಳ ಮಾಹಿತಿಯನ್ನು ಸೊಸೈಟಿ ನಿರ್ದೇಶಕರಾದ ಪಿ. ಎನ್. ಗಣಪತಿ ಭಟ್ ಪಡಕೊಂಡರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ ಸದಸ್ಯರು ಗಳಾದ ಸುಂದರಿ ಮುಂಡಡ್ಕ ಜಗದೀಶ್ ರೈ, ಸುಮತಿ ಶಕ್ತಿವೇಲು, ಹನೀಫ್ ಎಸ್ ಕೆ ಸವಾದ್ ಗೂನಡ್ಕ, ವಿಜಯ ಕುಮಾರ್ ವಿಮಲಾ ಪ್ರಸಾದ್, ಅನುಪಮಾ,ಸುಶೀಲ ಆಶಾ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿಗಳು, ಗ್ರಂಥಾಲಯ ಸಹಾಯಕರು, ಕಮ್ಯುನಿಟಿ ಹೆಲ್ತ್ ಆಫೀಸರ್ ಚಿತ್ರಾ, ಸಾರ್ವಜನಿಕರು ಹಾಜರಿದ್ದರು.