ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಭವಾನಿಶಂಕರ ಅಡ್ತಲೆಯವರಿಗೆ ಕಛೇರಿ ಅಧೀಕ್ಷಕರಾಗಿ ಮುಂಭಡ್ತಿ

0
240

ಅಕಾಡೆಮಿ ಆಫ್ ಲಿಬರಲ್‌ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ. ಯವರ ಆಡಳಿತದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ.ವಿ.ಜಿ. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಥಮ ದರ್ಜೆ ಸಹಾಯಕ ಭವಾನಿಶಂಕರಅಡ್ತಲೆಯವರು ಕಛೇರಿ ಅಧೀಕ್ಷಕರಾಗಿ ಮುಂಭಡ್ತಿ ಹೊಂದಿರುತ್ತಾರೆ.


ಇವರು ಅಕಾಡೆಮಿ ಆಫ್ ಲಿಬರಲ್‌ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಯಾಗಿ 1999ರಿಂದ ಸೇವೆ ಸಲ್ಲಿಸಿದರು. 2009ರಿಂದ ಕೆ.ವಿ.ಜಿ. ಕೈಗಾರಿಕಾ ತರಭೇತಿ ಸಂಸ್ಥೆಗೆ ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡರು. ಇವರು ಕಳೆದ ಅನೇಕ ವರ್ಷಗಳಿಂದ ಕೆ.ವಿ.ಜಿ. ಸಮೂಹ ವಿದ್ಯಾಸಂಸ್ಥೆಗಳಲ್ಲಿ ಪ್ರಾಧ್ಯಪಕರಾಗಿ ಕೂಡಾ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಅರಂತೋಡು ಗ್ರಾಮದ ಅಡ್ತಲೆ ಸುಬ್ಬಣ್ಣ ಗೌಡ ಮತ್ತು ಶ್ರೀಮತಿ ಹೊನ್ನಮ್ಮ ದಂಪತಿಗಳ ಪುತ್ರ.
ಈ ಸಂದರ್ಭದಲ್ಲಿ ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್‌ಊರುಬೈಲು, ಪ್ರಾಂಶುಪಾಲರಾದ ಚಿದಾನಂದಗೌಡ ಬಾಳಿಲ, ಅಕಾಡೆಮಿ ಕಛೇರಿಯ ಆಡಳಿತಾಧಿಕಾರಿ ಪ್ರಸನ್ನಕಲ್ಲಾಜೆ ಮತ್ತು ಕೆ.ವಿ.ಜಿಕೈಗಾರಿಕಾ ತರಭೇತಿ ಸಂಸ್ಥೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here