ನೂಜಾಲ : ವೃದ್ಧೆ ಆತ್ಮಹತ್ಯೆ

0

ನೆಲ್ಲೂರು ಕೆಮ್ರಾಜೆ ಗ್ರಾಮದ ನೂಜಾಲ ಎಂಬಲ್ಲಿ ವೃದ್ಧೆಯೊಬ್ಬರು ಬಾವಿಯ ಬಳ್ಳಿಯನ್ನು ಬಳಸಿ ನೇಣು ಹಾಕಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ವರದಿಯಾಗಿದೆ.

ನೂಜಾಲ ಸೀತು (ಅಂದಾಜು 75 ವರ್ಷ) ಎಂಬವರೇ ಮೃತ ವೃದ್ಧೆ.

ಕಣ್ಣಿನ ದೃಷ್ಟಿ ದೋಷ ಹೊಂದಿದ್ದ ಸೀತುರವರು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಅಥವಾ ಕಾಲುಜಾರಿ ಬಿದ್ದರಿಬಹದೇ ಎಂಬ ಶಂಕೆ ವ್ಯಕ್ತವಾಗಿದೆ.

ಇಂದು ಮಧ್ಯಾಹ್ನದ ವೇಳೆಗೆ ಘಟನೆ ಬೆಳಕಿಗೆ ಬದಿರುವುದಾಗಿ ತಿಳಿದು ಬಂದಿದೆ.

ಘಟನೆಗೆ ಕಾರಣ ತಿಳಿದು ಬಂದಿಲ್ಲ.

ಮೃತರು ಪುತ್ರ ಶಿವರಾಮ ನೂಜಾಲ, ಓರ್ವ ಪುತ್ರಿಯನ್ನು ಅಗಲಿದ್ದಾರೆ.