ಎಸ್ ವೈ ಎಸ್ ಗಾಂಧಿನಗರ ಬ್ರಾಂಚ್ ವತಿಯಿಂದ ವಿದೇಶಗಳಿಗೆ ಝಿಯಾರತ್ ಯಾತ್ರೆ ಕೈಗೊಂಡವರಿಗೆ ಬೀಳ್ಕೊಡುಗೆ ಹಾಗು ಸನ್ಮಾನ ಕಾರ್ಯಕ್ರಮ

0

ಎಸ್ ವೈ ಎಸ್ ಗಾಂಧಿನಗರ ಸುಳ್ಯ ಇದರ ವತಿಯಿಂದ ಪವಿತ್ರ ಝಿಯಾರತ್ ಯಾತ್ರೆಗಾಗಿ ವಿದೇಶಗಳಿಗೆ ತೆರಳಿರುವವರಿಗೆ ಬಿಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿರುವ ಸುನ್ನಿ ಸೆಂಟರ್ ನಲ್ಲಿ ಸೆ.15 ರಂದು ‌ನಡೆಯಿತು.


ಕಾರ್ಯಕ್ರಮವನ್ನು ಗಾಂಧಿನಗರ ಜುಮ್ಮಾ ಮಸೀದಿ ಮುದರಿಸ್ ಮೋಯ್ದಿನ್ ಸಹದಿ ಉದ್ಘಾಟಿಸಿದರು.
ಗಾಂಧಿನಗರ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ, ಅನ್ಸಾರಿಯ ಖತೀಬರಾದ ಉಮ್ಮರ್ ಮುಸ್ಲಿಯಾರ್,ಗಾಂಧಿನಗರ ಜಮಾಯತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೆ ಬಿ ಯಾತ್ರಾರ್ಥಿಗಳಿಗೆ ಶುಭಹಾರೈಸಿದರು.
ಎಸ್ ವೈ ಎಸ್ ಗಾಂಧಿನಗರ ಬ್ರಾಂಚ್ ಅಧ್ಯಕ್ಷ ಸಿದ್ದೀಕ್ ಕಟ್ಟೆಕ್ಕಾರ್ ಅಧ್ಯಕ್ಷತೆ ವಹಿಸಿದ್ದರು.


ಗಾಂಧಿನಗರ ಮಸೀದಿ ಮುಹದ್ಸಿನ್ ರವೂಪ್ ಮುಸ್ಲಿಯಾರ್,ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ, ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಮಹಮ್ಮದ್ ಹಾಜಿ,ರಜಾಕ್ ಹಾಜಿ ರಾಜಧಾನಿ,ಉಮ್ಮರ್ ಹಾಜಿ ಮೆಟ್ರೋ, ಮೊದಲಾದವರು ಉಪಸ್ಥಿತರಿದ್ದರು.

ಬಾಗ್ದಾದ್, ಈಜಿಪ್ಟ್ , ಫ್ಯಾಲೆಸ್ತಿನ್, ಇಸ್ರೇಲ್ , ಮುಂತಾದ ರಾಷ್ಟ್ರಗಳಲ್ಲಿ ಝಿಯಾರತ್ ಯಾತ್ರೆ ಕೈಗೊಳ್ಳಲಿರುವ ಗಾಂಧಿನಗರ ಜಮಾಅತ್ ಸದಸ್ಯರಾದ ಹಾಜಿ K.B ಮಹಮ್ಮದ್, ಹಾಜಿ ಉಮ್ಮರ್ ಕಟ್ಟೆಕ್ಕಾರ್,ಹಾಜಿ ಕಯ್ಯಾರ್ ಅಬ್ದುರ್ರಹ್ಮಾನ್ ,ಹಾಜಿ ಅಬ್ದುಲ್ ಖಾದರ್ ಬಿ ಕೆ ಕಲ್ಲಪ್ಪಳ್ಳಿ ಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ಸುಳ್ಯದ ಪತ್ರಕರ್ತರಾದ ಮೌನ ಸಾಧಕ ಪ್ರಶಸ್ತಿ ಪುರಸ್ಕೃತ ಶರೀಪ್ ಜಟ್ಟಿಪ್ಪಳ್ಳ ಹಾಗೂ “ಸಮಾಜ ರತ್ನ ಪ್ರಶಸ್ತಿ ಪುರಸ್ಕೃತ ಹಸೈನಾರ್ ಜಯನಗರ ರವರನ್ನು ಸನ್ಮಾನಿಸಿ ಗೌರವಿಸಿದರು.
ಹಮೀದ್ ಬೀಜಕೊಚ್ಚಿ ಸ್ವಾಗತಿಸಿ‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here