ಪಂಜ ಲಯನ್ಸ್ ಕ್ಲಬ್ ವತಿಯಿಂದ ಓಣಂ ಆಚರಣೆ

0

 

ಪಂಜ ಲಯನ್ಸ್ ಕ್ಲಬ್ ವತಿಯಿಂದ ಓಣಂ ಸಂಭ್ರಮ ಸೆ.೧೨ ರಂದು ಮನು ಪಲ್ಲೋಡಿಯವರ ಗೋಕುಲಂ ಮನೆಯಲ್ಲಿ ನಡೆಯಿತು.ಕ್ಲಬ್ ಅಧ್ಯಕ್ಷ
ಲ.ಪುರುಷೋತ್ತಮ ದಂಬೆಕೋಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಓಣಂ ಆಚರಣೆಯ ಜಿಲ್ಲಾ ಸಂಯೋಜಕ ಪಿ ಯಂ ಜೆ ಎಫ್ .ಲ. ವಿ ಎಂ ಸತೀಶನ್ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಎ ಎಸ್ ಐ ಭಾಸ್ಕರ ಅಡ್ಕಾರು ರವರನ್ನು ಕ್ಲಬ್ ನ ಪರವಾಗಿ ಸನ್ಮಾನಿಸಲಾಯಿತು. ಸಂಗೀತ ಕ್ಷೇತ್ರದ ಸಾಧನೆಗಾಗಿ ಮಯ‌ ಅಯನ ಪಲ್ಲೋಡಿ ಯವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಮನು ರವರ ಪುತ್ರ ಆರವ್ ಹಾಗೂ ಪಂಜ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಡ್ಕರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ವೇದಿಕೆಯಲ್ಲಿ ಲ.ಮನು ಪಲ್ಲೋಡಿ, ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಸಂತೋಷ್ ಜಾಕೆ , ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ.ನಾಗೇಶ್ ಕಿನ್ನಿಕುಮ್ರಿ, ಕೋಶಾಧಿಕಾರಿ ಲ.ಕರುಣಾಕರ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲ.ಶಶಿಧರ ಪಳಂಗಾಯ ವೇದಿಕೆಗೆ ಆಹ್ವಾನಿಸಿದರು. ಮಯ ಅಯನ ಪ್ರಾರ್ಥಿಸಿದರು.
ಲ.ಪುರಂದರ ಪನ್ಯಾಡಿ ಲಯನ್ಸ್ ಪ್ರಾರ್ಥನೆ ಮಾಡಿದರು.ಶ್ರೀಮತಿ ಆಶಾ ಮನು ಸ್ವಾಗತಿಸಿದರು. ಲ.ಕರುಣಾಕರ ಎಣ್ಣಿಮಜಲು ವಂದಿಸಿದರು.

 

 

 

LEAVE A REPLY

Please enter your comment!
Please enter your name here