ಚೊಕ್ಕಾಡಿ ಪ್ರೌಢಶಾಲೆಯ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ತಂಡ ವಿಭಾಗೀಯ ಮಟ್ಟಕ್ಕೆ ಆಯ್ಕೆ

0

 

 

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರಕಾರಿ ಪ್ರೌಢಶಾಲೆ ನಾಲ್ಯಪದವು ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ರಚಿತಾ ಎಂ ಪಿ, ಅನನ್ಯ ಎಂ ಕೆ, ವರ್ಷಿಣಿ ಟಿ, ಮಾನ್ಯಶ್ರೀ, ಹಸ್ತಾ ಕೆ ಎಂ, ಶ್ರೀಹಸ್ತಾ ಕೆ, ಜಲಧಿ ಕೆ, ರೇಣುಕಾ ಎನ್ ತಂಡದಲ್ಲಿ ಭಾಗವಹಿಸಿದ್ದರು. ತರಬೇತುದಾರರಾಗಿ ತೇಜಸ್ವಿ ಕಡಪಳ, ಹರಿಪ್ರಸಾದ ಕೆ ಸಹಶಿಕ್ಷಕರು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ, ಧನ್ಯರಾಜ್ ಮೂಕಮಲೆ ಸಹಕರಿಸಿದರು.