ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

 

ನಿವ್ವಳ ಲಾಭ- 36.35 ಲಕ್ಷ, 7% ಡಿವಿಡೆಂಟ್ ಘೋಷಣೆ

ಮರಣ ಸಾಂತ್ವಾನ ಮಹಾ ಪ್ರಸ್ಥಾನ ನಿಧಿ ಉದ್ಘಾಟನೆ
ಮಹಾ ಪೋಷಕರಿಗೆ ಸನ್ಮಾನ- ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 103 ನೇ ವಾರ್ಷಿಕ ಮಹಾಸಭೆಯು ಸೆ. ‌15 ರಂದು ಸಂಘದ ವಜ್ರ ಮಹೋತ್ಸವ ಸಭಾಂಗಣದಲ್ಲಿ ಅಧ್ಯಕ್ಷ ಬಿ. ಶ್ರೀಪತಿ ಭಟ್ ಮಜಿಗುಂಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಆರಂಭದಲ್ಲಿ ಇತ್ತೀಚೆಗೆ ಅಗಲಿದ ಸಂಘದ ಮಾಜಿ ಉಪಾಧ್ಯಕ್ಷ ವಿವೇಕಾನಂದ ಗೌಡ ಕೋಲ್ಚಾರು, ನಿರ್ದೇಶಕ ಬೆಳ್ಳಕುಂಞ ಗುಂಡ್ಯ, ನಿವೃತ್ತ ಸಿ.ಇ.ಒ ಜಿ.ಸುಂದರ ಗೌಡ ಗುಂಡ್ಯ ಹಾಗೂ ಅಗಲಿದ ಸದಸ್ಯರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘವು ಪ್ರಸ್ತುತ ವರ್ಷದಲ್ಲಿ 2812 ಸದಸ್ಯರನ್ನು ಹೊಂದಿದ್ದು 3.54 ಕೋಟಿ ಪಾಲುಬಂಡವಾಳ ಕ್ರೋಡೀಕರಿಸಿ ಶೇ .98.24 ಸಾಲ ವಸೂಲಾತಿ ಮಾಡಲಾಗಿದೆ. ಒಟ್ಟು ಠೇವಣಾತಿ 20.80 ಕೋಟಿ ಹೊಂದಿರುತ್ತದೆ.ಸಂಘದ ಬಂಡವಾಳ ವರ್ಷಾಂತ್ಯಕ್ಕೆ 42.05 ಕೋಟಿ ಇದ್ದು ವರದಿ ಸಾಲಿನಲ್ಲಿ ರೂ.36,35,631 ಲಕ್ಷ ಲಾಭಾಂಶ ಹೊಂದಿದ್ದು ಶೇ. 7% ಡಿವಿಡೆಂಡ್ ನೀಡಲಾಗುತ್ತದೆ. ವರದಿ ಸಾಲಿನಲ್ಲಿ 28.23 ಕೋಟಿ ಸದಸ್ಯರ ಕೃಷಿ ಹಾಗೂ ಕೃಷಿಯೇತರ ಸಾಲ ಹೊರಬಾಕಿ,‌ರೂ. 18.85 ಕೋಟಿ ಕೃಷಿ ಸಾಲ ಹಂಚಿಕೆಯಾಗಿದ್ದು 17.75 ಕೋಟಿ ಸಾಲ ವಸೂಲಿಯಾಗಿರುವುದು.ರೂ.27.90 ಕೋಟಿ ಕೃಷಿ ಸಾಲ ಹೊರಬಾಕಿ ಇರುವುದು. ಕೃಷಿಯೇತರ ಸಾಲ 13.10 ಕೋಟಿ ಹಂಚಿಕೆಯಾಗಿದೆ. ರೂ.2.01 ಕೋಟಿ ಕೃಷಿಯೇತರ ಸಾಲ ಹೊರಬಾಕಿ ಇದೆ. ವರ್ಷಾಂತ್ಯದಲ್ಲಿ 29.92 ಕೋಟಿ ಕೃಷಿ ಹಾಗೂ ಕೃಷಿಯೇತರ ಸಾಲ ಹೊರಬಾಕಿ ಇರುವುದು.ಹವಮಾನಾಧಾರಿತ ಬೆಳೆ ವಿಮೆ ಕಂತಿನ ಮೊಬಲಗು 27,16,850 ಪಾವತಿಸಲಾಗಿದೆ.
ಸಂಘದ ಶತಮಾನೋತ್ಸವ ಆಚರಣೆಯ ನೆನಪಿಗಾಗಿ 7 ನೇ ತರಗತಿ ಮತ್ತು ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಯರಿಗೆ ಹಾಗೂ ಬಡ ಕುಟುಂಬಗಳಿಗೆ ಕಿಟ್ ವಿತರಿಸಲು ಸಾರ್ವಜನಿಕೋಪಕಾರ ನಿಧಿಯಿಂದ 54 ಸಾವಿರ ವಿನಿಯೋಗಿಸಲಾಗಿದೆ ಎಂದು ಅಧ್ಯಕ್ಷ ರು ವರದಿಯಲ್ಲಿ ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಮರಣ ಸಾಂತ್ವಾನ ಮಹಾ ಪ್ರಸ್ಥಾನ ನಿಧಿಗೆ ಹಿರಿಯರಾದ ಸಂಘದ ಮಾಜಿ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ ಅನಂತ ಬಡ್ಡಡ್ಕ ರವರು ಚೆಕ್ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ರೂ.10 ಸಾವಿರದಂತೆ ನೀಡಿದ ಪೋಷಕರಾದ ಶ್ರೀಮತಿ ವೇದಾವತಿ ಅನಂತ ಬಡ್ಡಡ್ಕ, ಗಿರಿಜಾ ಶಂಕರ ತುದಿಯಡ್ಕ, ದಾಮೋದರ ಗೌಡ ನಾರ್ಕೋಡು, ಸುಧಾಮ ಆಲೆಟ್ಟಿ,
ಸತೀಶ್ ಕುಂಭಕ್ಕೋಡು, ಮುಕುಂದ ನಾರ್ಕೋಡು, ಧರ್ಮಪಾಲ ಕೊಯಿಂಗಾಜೆ, ಎಂ.ಬಿ.ಶಿವರಾಮ ನಾಯ್ಕ್, ಶ್ರೀಮತಿ ಪೂರ್ಣಿಮಾ ತೀರ್ಥಕುಮಾರ್ ಕುಂಚಡ್ಕ, ರಾಧಾಕೃಷ್ಣ ಕೋಲ್ಚಾರು ರವರನ್ನು ಸನ್ಮಾನಿಸಲಾಯಿತು.
ನೋಂದಾವಣೆ ಮಾಡಿದ ಸಂಘದ ಸದಸ್ಯರು ಮರಣ ಹೊಂದಿದ ಸಂದರ್ಭ ಮಹಾಪ್ರಸ್ಥಾನ ನಿಧಿಯಿಂದ ಶೇ2% ರಂತೆ ಅಂದರೆ ತಲಾ 7 ಸಾವಿರದಷ್ಟು ಸಹಾಯ ಧನ ನೀಡುವ ಯೋಜನೆ ಇದಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕುಡೆಕಲ್ಲು, ನಿರ್ದೇಶಕ ರಾದ ಕರುಣಾಕರ ಹಾಸ್ಪಾರೆ, ಜಯಪ್ರಕಾಶ್ ಕುಂಚಡ್ಕ, ಹರೀಶ್ ಕೆ.ಜೆ,ಸುದರ್ಶನ ಪಾತಿಕಲ್ಲು, ಸೂರ್ಯನಾರಾಯಣ ನಾಯಕ್, ಸುಧಾಕರ ಆಲೆಟ್ಟಿ, ಗಂಗಾಧರ ಎನ್.ಎ, ಶಿವರಾಮ ನಾಯ್ಕ್ ಕಾಪುಮಲೆ, ತಂಗವೇಲು ನಾಗಪಟ್ಟಣ, ಶ್ರೀಮತಿ ಶ್ರೀದೇವಿ ಭಟ್ ಮಜಿಗುಂಡಿ, ಡಿ.ಸಿ.ಸಿ.ಬ್ಯಾಂಕ್ ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ಸಿ.ಇ.ಒ ದಿನಕರ ಎ ಉಪಸ್ಥಿತರಿದ್ದರು.
ಸಿಬ್ಬಂದಿ ಪ್ರವೀಣ್ ಆಲೆಟ್ಟಿ ಪ್ರಾರ್ಥಿಸಿದರು. ಶ್ರೀಪತಿ ಭಟ್ ಮಜಿಗುಂಡಿ ಸ್ವಾಗತಿಸಿದರು. ಸುದರ್ಶನ ಪಾತಿಕಲ್ಲು ವಂದಿಸಿದರು. ದಿನಕರ ಎ ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಸದಸ್ಯರು ಭಾಗವಹಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.