ಸುಳ್ಯಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ

0

 

 

ಹಿರಿಯ ನಿವೃತ್ತ ಇಂಜಿನಿಯರ್ ಸಂಕಪ್ಪ ಗೌಡರಿಗೆ ಸನ್ಮಾನ – ಪ್ರತಿಭಾನ್ವಿತ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಅಭಿನಂದನೆ

ಸುಳ್ಯ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಸೆ.15 ರಂದು ಸುಳ್ಯ ವರ್ತಕರ ಭವನ ಅಂಬಟೆಡ್ಕದಲ್ಲಿ ಇಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷ ಪ್ರಸಾದ್ ಎಂ.ಎಸ್ ರವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಎಕ್ಸಿಕ್ಯುಟಿವ್ ಇಂಜಿನಿಯರ್ ಸಣ್ಣೇ ಗೌಡ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ,
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್, ಅಸೋಸಿಯೇಷನ್ ನಿಕಟ ಪೂರ್ವ ಅಧ್ಯಕ್ಷ ಸುಮಿತ್ರ ಇಂಜಿನಿಯರ್, ನಿವೃತ್ತ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಂಕಪ್ಪ ಗೌಡ ,ಅಸೋಸಿಯೇಷನ್ ಕೋಶಾಧಿಕಾರಿಇಂಜಿನಿಯರ್ ಶ್ಯಾಮ್ ಪ್ರಸಾದ್ , ಕಾರ್ಯದರ್ಶಿ ಇಂಜಿನಿಯರ್ ಗಿರೀಶ್ ನಾರ್ಕೋಡು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಹಿರಿಯ ನಿವೃತ್ತ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಂಕಪ್ಪ ಗೌಡ ನೀರ್ಪಾಡಿಯವರನ್ನು ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರಿಗೆ ಭಾರತೀಯ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಗೌರವ ಸದಸ್ಯತ್ವದ ಸರ್ಟಿಫಿಕೇಟ್ ನೀಡಿ ಪುರಸ್ಕರಿಸಲಾಯಿತು.

ಪ್ರತಿಭಾನ್ವಿತ ಇಂಜಿನಿಯರ್ ವಿದ್ಯಾರ್ಥಿಗಳಾದ ಅಭಿಷೇಕ್ ಕೆ ಮತ್ತು ರಮೇಶ್ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಇಂಜಿನಿಯರ್ ಕೃಷ್ಣ ರಾಜ್ ಕೇರ್ಪಳ
ಪ್ರಾರ್ಥಿಸಿದರು. ಇಂಜಿನಿಯರ್ ವೈಭವ್ ಸ್ವಾಗತಿಸಿದರು. ಇಂಜಿನಿಯರ್ ಕೃಷ್ಣ ರಾವ್ ನಾವೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಇಂಜಿನಿಯರ್ ಗಿರೀಶ್ ನಾರ್ಕೋಡು ವರದಿ ವಾಚಿಸಿದರು. ಇಂಜಿನಿಯರ್ ಅಬ್ದುಲ್ ನಾಸಿರ್ ಅತಿಥಿಗಳ ಪರಿಚಯ ಮಾಡಿದರು. ಇಂಜಿನಿಯರ್ ಸಾಕೇಶ್ ಸನ್ಮಾನಿತರ ಪರಿಚಯ ವಾಚಿಸಿದರು. ಇಂಜಿನಿಯರ್ ಸೃಜನ್ ವಂದಿಸಿದರು. ಇಂಜಿನಿಯರ್ ನವನೀತ್ ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ರಾಷ್ಟಗೀತೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.