ಬೆಳ್ಳಾರೆ ಸಿ.ಎ.ಬ್ಯಾಂಕ್ ಅಧ್ಯಕ್ಷರ ಕಿಸೆಯಿಂದ 50 ಸಾವಿರ ರೂ.ನಗದು ನಾಪತ್ತೆ

0

ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈಯವರ ಹುಟ್ಟುಹಬ್ಬದ ಪ್ರಯುಕ್ತ ಪೆರ್ನೆಯಲ್ಲಿ ನಡೆದ ರಕ್ತದಾನ ಶಿಬಿರ ,ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬೆಳ್ಳಾರೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಅವರ 50 ಸಾವಿರ ರೂ ನಾಪತ್ತೆಯಾಗಿದೆ.
ತಾನು ಅಡಿಕೆ ಮಾರಾಟ ಮಾಡಿದ ಅಂಗಡಿಯವರು ನೀಡಿದ್ದ ನಗದು 50 ಸಾವಿರ ರೂಗಳನ್ನು ಪ್ಯಾಂಟಿನ ಎಡಬದಿಯ ಕಿಸೆಯೊಳಗೆ ಇಟ್ಟುಕೊಂಡಿದ್ದೆ.ರಮಾನಾಥ ರೈಯವರ ಹಾರಾರ್ಪಣೆ ಸಂದರ್ಭ ಒಮ್ಮೆಲೆ ರಶ್ ಉಂಟಾಗಿತ್ತು.
ಈ ವೇಳೆ ನನ್ನ ಕಿಸೆಯಲ್ಲಿದ್ದ 50 ಸಾವಿರ ರೂಗಳ ಕಟ್ಟು ನಾಪತ್ತೆಯಾಗಿದೆ.ಇದನ್ನು ಯಾರಾದರೂ ಎಗರಿಸಿರುವ ಸಾಧ್ಯತೆ ಇದೆ.
ಘಟನೆ ಬಳಿಕ ನಾವು ಸಮಾರಂಭ ನಡೆದ ಸಭಾಂಗಣದಲ್ಲಿ ಸಿ.ಸಿ.ಕ್ಯಾಮರಾ ಚೆಕ್ ಮಾಡೋಣ ಎಂದು ಹೋದೆವು ಆದರೆ ಅಲ್ಲಿ ಸಿ.ಸಿ.ಕ್ಯಾಮರಾ ಇರಲಿಲ್ಲ ಎಂದು ಅನಿಲ್ ರೈ ಹೇಳಿದ್ದಾರೆ.