ಸುಳ್ಯ ಜೇಸಿ ಸಪ್ತಾಹ ‌ನಮಸ್ತೆ ಜೇಸಿಐ ವೀಕ್ ಸಮಾರೋಪ ಸಮಾರಂಭ

0

 

ಯುವ ಉದ್ಯಮಿ ಮಿಥುನ್ ಶೆಣೈಯವರಿಗೆ ಯೂತ್ ಇನ್ಸ್ಪಯರ್ ಪ್ರಶಸ್ತಿ ಪ್ರದಾನ

ಜೇಸಿಐ ಸುಳ್ಯ ಸಿಟಿ ಹಾಗೂ ಯುವ ಜೇಸಿ ವಿಭಾಗ ಇದರ ವತಿಯಿಂದ ನಡೆಯುತ್ತಿರುವ ಜೇಸಿ ಸಪ್ತಾಹ ನಮಸ್ತೆ ಜೇಸಿ ವೀಕ್ ಕಾರ್ಯಕ್ರಮದ ಸಮಾರೋಪ ಮತ್ತು ಯೂತ್‌ ಇನ್ಸ್ಪಯರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆ.15 ಪರಿವಾರ ಕಾನದ ಉಡುಪಿ ಗ್ರ್ಯಾಂಡ್ ಪರಿವಾರ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸಿಐ ಸುಳ್ಯ ಅಧ್ಯಕ್ಷ ಬಶೀರ್ ಯು ಪಿ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ಚಾಲನೆ ನೀಡಿದರು.
ಜೇಸಿಐ ಸುಳ್ಯ ಸಿಟಿ ಸ್ಥಾಪಕ ಮನಮೋಹನ್ ಬಳ್ಳಡ್ಕ ಪ್ರಸ್ತಾವಿಕ ಮಾತನಾಡಿದರು.
ಬೆಳ್ಳಾರೆ ಯುವ ಉದ್ಯಮಿ ಜೇಸಿ ಮಿಥುನ್ ಶೆಣೈಯವರಿಗೆ ಜೇಸಿ ಯೂತ್ ಇನ್ಸ್ಪಯರ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಸನ್ಮಾನಿಸಲಾಯಿತು.


ಸನ್ಮಾನಿತರ ಅಭಿನಂದನ ಭಾಷಣವನ್ನು ಜೇಸಿ ಪ್ರದೀಪ್ ಕುಮಾರ್ ಪನ್ನೆ ಮಾಡಿದರು.
ಜೇಸಿಐ ಭಾರತದ ಕಾನೂನು ಸಲಹಾ ಸಮಿತಿ ಸದಸ್ಯೆ ಸೌಜನ್ಯ ಹೆಗ್ಡೆ,ಜೇಸಿಐ ವಲಯ ಉಪಾಧ್ಯಕ್ಷ ರವಿಚಂದ್ರ ಪಾಟಳಿ,ಜೇಸಿಐ ಸುಳ್ಯ ಸಿಟಿ ಸ್ಥಾಪಕಧ್ಯಕ್ಷ ಸತೀಶ್,ಜೇಸಿಐ ಪೂರ್ವಾಧ್ಯಕ್ಷರಾದ ವಿನಯರಾಜ್ ಮಡ್ತಿಲ,ಚಂದ್ರಶೇಖರ ಕನಕಮಜಲು,ಯುವ ಜೇಸಿ ಅಧ್ಯಕ್ಷ ಯಕ್ಷಿತ್, ತೀರ್ಥವರ್ಣ ಬಳ್ಳಡ್ಕ, ದೀಪಕ್ ಗಂಗೋಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೇಸಿಐ ಸಪ್ತಾಹದ ವರದಿಯನ್ನು ಜೇಸಿ ಅಶ್ವಥ್ ಅಡ್ಕಾರ್ ವಾಚಿಸಿದರು.
ಇದೇ ಸಂದರ್ಭದಲ್ಲಿ ಜೇಸಿಐ ಸುಳ್ಯ ತಂಡಕ್ಕೆ ನೂತನ ಸದಸ್ಯರನ್ನು ಸೇರ್ಪಡೆ ಮಾಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಶಶಿಧರ ಎಕ್ಕಡ್ಕ ವಂದಿಸಿದರು.

LEAVE A REPLY

Please enter your comment!
Please enter your name here