ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

 

 

ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ಸದಾನಂದ ಮಾವಜಿ ಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಸಭಾಭವನದಲ್ಲಿ ನಡೆಯಿತು.

 

ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರು 2006ರಲ್ಲಿ ಸಂಘವು ಪ್ರಾರಂಭಗೊಂಡಿದ್ದು ವರದಿ ಸಾಲಿನಲ್ಲಿ 206 ಸದಸ್ಯರನ್ನು ಹೊಂದಿದೆ. 77, 800 ಪಾಲು ಬಂಡವಾಳ ಇದೆ. 84,45, 639.37 ಮೊತ್ತದ 2, 75, 376 ಕೆಜಿ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಮತ್ತು 18,99,700 ರೂ ಮೊತ್ತದ 96.5 ಟನ್ ಪಶು ಆಹಾರವನ್ನು ಖರೀದಿಸಲಾಗಿದೆ. ರೂ.19,25,060 ಮೊತ್ತ 96.8 ಟನ್ ಪಶು ಆಹಾರವನ್ನು ಹಾಲು ಉತ್ಪಾದಕರಿಗೆ ಮಾರಾಟ ಮಾಡಲಾಗಿದೆ. ಹೀಗೆ ಹಾಲಿನ ವ್ಯಾಪಾರದಿಂದ ಮತ್ತು ಇತರ ಆದಾಯ ಸೇರಿ ಒಟ್ಟು 9,19,781 ಲಾಭ ಬಂದಿದೆ. ವರದಿ ವರ್ಷದಲ್ಲಿ ಸಂಘಕ್ಕೆ ರೂ 4,49,544.37 ಖರ್ಚಾಗಿದ್ದು ರೂ 4,70, 227.59 ನಿವ್ವಳ ಲಾಭ ಬಂದಿದೆ ಎಂದು ಹೇಳಿದರು.

ಒಕ್ಕೂಟದ ವಿಸ್ತರಣಾಧಿಕಾರಿ ನಿರಂಜನ್ ಬಿ.ಎನ್. ಮತ್ತು ಪಶು ವೈದ್ಯಾಧಿಕಾರಿ ಡಾ. ಪೂಜಾ ಜಿ.ಎಸ್. ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ವೆಂಕಪ್ಪ ನಾಯ್ಕ ಈಶ್ವರ ಮೂಲೆ, ಪುಷ್ಪಾವತಿ ಕಣೆಮರಡ್ಕ, ಶಾರದಾ ಕುಂಟಿಕಾನ, ಅನಿತಾ ಕುಕ್ಕುಡೇಲು, ಕೃಷ್ಣಪ್ರಸಾದ್ ಭಟ್, ದೇವರಾಜ ಸಂಕೇಶ, ಪುಷ್ಪ ವತಿ ಅತ್ಯಾಡಿ, ಗೋಪಾಲ ಮಣಿಯಾಣಿ, ಲೋಲಾಕ್ಷಿ ತೋಟ ಪಾಡಿ, ಖರೀದಿ ಕೇಂದ್ರ ಪೇರಾಲು ಸಹಾಯಕಿ ಸುನಿತಾ ಮತ್ತು ಕೃತಕ ಗರ್ಭಧಾರಣೆ ಪ್ರತಿನಿಧಿ ಯತೀಶ ದೇಲಂಪಾಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಕು. ಪುಷ್ಪಾವತಿ ವಾರ್ಷಿಕ ವರದಿ ವಾಚಿಸಿದರು. ಸಂಘದ ಸದಸ್ಯೆ ಸಂಧ್ಯಾ ಮಾವಂಜಿ ಪ್ರಾರ್ಥಿಸಿದರು. ನಿರ್ದೇಶಕ ಪ್ರಶಾಂತ್ ಕಕ್ಕಾಜೆ ವಂದಿಸಿದರು.