ಕುಜುಂಬಾರು- ಇಜಿನಡ್ಕ ಸಂಪರ್ಕ ಸೇತುವೆಗೆ ಶನಿ ಕಾಟ

0

ಸುಬ್ರಮಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲ್ಸೂರು- ಸುಬ್ರಮಣ್ಯ ಹೆದ್ದಾರಿಯಿಂದ ಕವಲೊಡೆದು ಹೋಗುವ ದೇವರಹಳ್ಳಿ, ಕುಜುಂಬಾರು – ಇಜಿನಡ್ಕ ಸಂಪರ್ಕ ರಸ್ತೆಯ ಕುಜುಂಬಾರು ಎಂಬಲ್ಲಿ ಹೊಳೆಯೊಂದು ಹರಿಯುತ್ತಿದ್ದು, ಮಳೆಗಾಲ ತುಂಬಿ ಹರಿದಾಗ ಆ ಭಾಗದ ಜನರಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿದೆ.

ಇಲ್ಲಿಗೆ ಸೇತುವೆ ನಿರ್ಮಿಸಿ ಕೊಡುವಂತೆ ಸುಮಾರು ೨೫ ವರ್ಷಗಳಿಂದೀಚೆ ನಿರಂತರ ಹೋರಾಟಗಳು ನಡೆಯುತ್ತದೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಪ್ರತಿವರ್ಷ ಮಳೆಗಾಲ ಸ್ಥಳೀಯ ಆಡಳಿತದವರು ತಾತ್ಕಾಲಿಕ ಪಾಲವನ್ನ ನಿರ್ಮಿಸಿ ಕೊಡುತ್ತಿದ್ದಾರೆ. ಈ ಭಾಗದಲ್ಲಿ ಅದೆಷ್ಟೋ ಮನೆಗಳು ಇದ್ದು ಅವರೆಲ್ಲ ಕೃಷಿಕರಾಗಿದ್ದು, ಅವರು ಪೇಟೆಗೆ ಹೋಗಿ ಬರಲು ಇದೇ ಒಂದು ಸಂಪರ್ಕ ರಸ್ತೆಯನ್ನು ಅವಲಂಬಿಸಿರುತ್ತಾರೆ. ಚುನಾವಣಾ ಪೂರ್ವದಲ್ಲಿ ಮತಯಾಚನೆಗಾಗಿ ಬರುವ ಸ್ಪರ್ಧಾಕಾಂಕ್ಷಿಗಳು ಸೇತುವೆ ನಿರ್ಮಿಸುವ ಭರವಸೆಯನ್ನು ನೀಡಿ ಆ ಭಾಗದ ಜನರಿಂದ ಮತ ಪಡೆದು ನಂತರ ಆ ಕಡೆಗೆ ತಿರುಗಿಯು ನೋಡುವುದಿಲ್ಲ ಎಂಬುದಾಗಿ ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಈ ಭಾಗಕ್ಕೆ ಸೇತುವೆಯ ನಿರ್ಮಾಣಕ್ಕಾಗಿ ಶನಿ ಕಾಟ ಎಂಬಂತಾಗಿದೆ. ಈ ಬಾರಿಯಾದರೂ ಪ್ರಕೃತಿ ವಿಕೋಪ ಇನ್ನಿತರ ಯೋಜನೆಗಳಿಂದ ಅನುದಾನ ಬಂದು ಸೇತುವೆ ನಿರ್ಮಾಣವಾಗಲಿ ಎಂಬುದು ಆ ಭಾಗದ ಜನರ ಆಶಯವಾಗಿದೆ ಈ ಬಗ್ಗೆ ಜನಪ್ರತಿನಿಧಿಗಳು ಮತ್ತೊಮ್ಮೆ ಗಮನ ಹರಿಸಬೇಕಾಗಿದೆ. (ವರದಿ.ಡಿ.ಹೆಚ್.)