ಐನೆಕಿದು ಶಾಲೆಯಲ್ಲಿ ಪೋಷಣ ಅಭಿಯಾನ

0

 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐನೆಕಿದು ಇಲ್ಲಿ ಸೆ. 16 ರಂದು 2022 -23 ನೇ ಸಾಲಿನ ಪೋಷಣ ಅಭಿಯಾನ ಕಾರ್ಯಕ್ರಮ ನಡೆ ಯಿತು. ವಿದ್ಯಾರ್ಥಿಗಳು ವಿವಿಧ ತರಕಾರಿಗಳು ಮತ್ತು ಸಿರಿಧಾನ್ಯ ಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ ಪ್ರದರ್ಶಿಸಿದರು.

ಮತ್ತು ಅವುಗಳ ಉಪಯುಕ್ತತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಮುಖ್ಯ ಶಿಕ್ಷಕರಾದ ಶ್ರೀಮತಿ ಸರಿತಾ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಶ್ರೀಮತಿ ಹೇಮಾ , ಹಳೆ ವಿದ್ಯಾರ್ಥಿ ಲೋಹಿತ್ ಕೆ. , ಅಡುಗೆ ಸಹಾಯಕರು, ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಶಿಕ್ಷಕರಾದ ನರೇಂದ್ರ ಟಿ ಯವರು ಸಹಕರಿಸಿದರು.