ಕೆ.ವಿ.ಜಿ.ಪಾಲಿಟೆಕ್ನಿಕ್ : ಇಂಜಿನಿಯರ್‍ಸ್ ದಿನಾಚರಣೆ

0

ಸುಳ್ಯ ಸೆ.೧೫ :ಕುರುಂಜಿ ವೆಂಕಟ್ರಮಣಗೌಡ ಪಾಲಿಟೆಕ್ನಿಕ್‌ನರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವರೆಡ್‌ಕ್ರಾಸ್ ಘಟಕಗಳ ವತಿಯಿಂದ ಇಂಜಿನಿಯರ್‍

ಸ್ ದಿನಾಚರಣೆ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮೂಡುಬಿದ್ರೆಎಸ್.ಎನ್.ಎಂ ಪಾಲಿಟೆಕ್ನಿಕ್‌ನಉಪನ್ಯಾಸಕ ಸುದರ್ಶನಕಿಣಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ವಿದ್ಯಾರ್ಥಿಗಳು ಸ್ಥಳೀಯ ಕೃಷಿ ಕಾರ್ಯಗಳಿಗೆ ಪೂರಕವಾದ ಯಂತ್ರೋಪಕರಣಗಳನ್ನು ಅನ್ವೇಷಣೆ ಮಾಡಬೇಕು. ಕೆ.ವಿ.ಜಿ ಪಾಲಿಟೆಕ್ನಿಕ್‌ಜ್ಞಾನದ ಸಾಗರವಾಗಿದೆ, ಯಾಕೆಂದರೆಡಾ.ಕುರುಂಜಿ ವೆಂಕಟ್ರಮಣಗೌಡರಿಂದ ಸ್ಥಾಪಿತವಾದ ಈ ಸಂಸ್ಥೆಯುಡಾ. ರೇಣುಕಾಪ್ರಸಾದ್ ಕೆ.ವಿಯವರ ಆಡಳಿತದಲ್ಲಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಅಲ್ಲದೇ ಒಂದೇ ಕ್ಯಾಂಪಸ್ ನಲ್ಲಿಇಂಜಿನಿಯರಿಂಗ್‌ಕಾಲೇಜುಕೂಡಾಇರುವುದರಿಂದ ವಿದ್ಯಾರ್ಥಿಗಳಿಗೆ ಬೇಕಾದಷ್ಟು ಸಂಪನ್ಮೂಲ ಸಿಗುತ್ತದೆ ಅದನ್ನು ಬಳಸಿಕೊಳ್ಳಬೇಕು ಎಂದರು.

ಇನ್ನೋರ್ವಅತಿಥಿ ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳದ ಉಪನ್ಯಾಸಕ ಸನತ್‌ರಾಮ್ ಮಾತನಾಡಿ ‘ನಾವು ಸಮಾಜಕ್ಕಾಗಿದುಡಿದರೆ ಸಮಾಜ ನಮ್ಮನ್ನು ಮರೆಯುವುದಿಲ್ಲ ಆದರೆ ನಮ್ಮ ಸ್ವಾರ್ಥಕ್ಕಾಗಿದುಡಿದರೆ ಸಮಾಜ ನಮ್ಮನ್ನು ನೆನಪಿಸಿಕೊಳ್ಳುವುದಿಲ್ಲ’ ಎಂಬ ಮಾತಿನಂತೆಸರ್.ಎಂ.ವಿಶ್ವೇಶ್ವರಯ್ಯನವರು ಸಮಾಜಕ್ಕಾಗಿದುಡಿದಕಾರಣಇಂದುಎಲ್ಲರೂಅವರನ್ನು ನೆನಪಿಸಿಕೊಳ್ಳುತ್ತಾರೆ ಹಾಗೂ ಅವರಜನ್ಮದಿನವನ್ನುಇಂಜಿನಿಯರ್‍ಸ್ ದಿನಾಚರಣೆಯಾಗಿಆಚರಿಸುತ್ತಾರೆಎಂದರಲ್ಲದೇ ವಿಶ್ವೇಶ್ವರಯ್ಯನವರಶಿಸ್ತು, ಕಾರ್ಯಕ್ಷಮತೆ, ಪ್ರಾಮಾಣಿಕತೆ, ಸಮಯಪಾಲನೆ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.


ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶಕೆ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವೇಶ್ವರಯ್ಯನವರು ಭಾರತಕ್ಕೆ ನೀಡಿದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದ ವೇದಿಕೆಯಲ್ಲಿಉಪಪ್ರಾಂಶುಪಾಲ ಶ್ರೀಧರ್ ಎಂ.ಕೆ, ಅಕಾಡೆಮಿಕ್‌ಡೀನ್‌ಚಂದ್ರಶೇಖರ್‌ಎಂ.ಎನ್, ಕಛೇರಿಅಧೀಕ್ಷಕಧನಂಜಯಕಲ್ಲುಗದ್ದೆ, ಎನ್ನೆಸ್ಸೆಸ್ ನಾಯಕ ಹಿತೇಶ್ ಎಂ.ವಿಉಪಸ್ಥಿತರಿದ್ದರು.ಸಮಾರಂಭದಲ್ಲಿ ಅತಿಥಿಗಳಾದ ಸುದರ್ಶನ್‌ಕಿಣಿ ಹಾಗೂ ಸನತ್‌ರಾಮ್‌ರವರನ್ನು ಸನ್ಮಾನಿಸಲಾಯಿತು.ಸ್ವಯಂ ಸೇವಕ ವೀಕ್ಷಿತ್ ಪ್ರಾರ್ಥಿಸಿದರು.ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ ಸುನಿಲ್‌ಕುಮಾರ್‌ಎನ್.ಪಿ ವಂದಿಸಿದರು.ಶಿಕ್ಷಕ ನಾರಾಯಣತೋರಣಗಂಡಿಕಾರ್ಯಕ್ರಮ ನಿರೂಪಿಸಿದರು.