ಬೆಳ್ಳಾರೆ : ಮೂಡಾಯಿತೋಟ ಸ್ಮಶಾನ ಜಾಗ ಅತಿಕ್ರಮಣ ಆರೋಪ

0

 

ನಿವಾಸಿಗಳಿಂದ ತಹಶೀಲ್ದಾರರಿಗೆ ದೂರು

ಸ್ಮಶಾನದ ಜಾಗವನ್ನು ಸ್ಥಳೀಯರು ಕಬಳಿಸಿದ್ದಾರೆಂದು ಆರೋಪಿಸಿ ಮೂಡಾಯಿತೋಟದ ದಲಿತ ನಿವಾಸಿಗಳು ತಹಶೀಲ್ದಾರರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.

 

ಬೆಳ್ಳಾರೆ ಗ್ರಾಮದ ಸರ್ವೆ ನಂಬ್ರ 20ರಲ್ಲಿ ಸುಮಾರು 5-6 ಎಕ್ರೆ ಸ್ಥಳವು ಸರಕಾರಿ ಜಾಗವಾಗಿದ್ದು, ಇದರಲ್ಲಿ 1,25 ಎಕ್ರೆ ಸ್ಥಳವನ್ನು ಸಶಾನಕ್ಕಾಗಿ ಉಪಯೋಗ ಮಾಡಿಕೊಂಡಿದ್ದು, ಇದೀಗ ಸ್ಥಳೀಯ ನಿವಾಸಿಗಳು ಇದನ್ನು ಅತಿಕ್ರಮಣ ಮಾಡಿಕೊಳ್ಳಲು, ಜೆ.ಸಿ.ಬಿ.ಯಿಂದ ಸಮತಟ್ಟು ಮಾಡುತ್ತಿದ್ದು, ಈಗಾಗಲೇ ಇದನ್ನು ಸರ್ವೆ ಮಾಡಲು ಬೆಳ್ಳಾರೆ ಗ್ರಾಮ ಕರಣಿಕರು ತಾಲೂಕು ಕಛೇರಿಗೆ ಬರೆದುಕೊಂಡಿದ್ದು, ಇದನ್ನು ಸರ್ವೆ ಆಗುವವರೆಗೆ ನಿಲ್ಲಿಸುವಂತೆ ಸೂಚಿಸಿದ್ದರು. ಕೆಲಸವನ್ನು ನಿಲ್ಲಿಸಿರುವುದಿಲ್ಲ.


ಬೆಳ್ಳಾರೆ ಗ್ರಾಮದ ಮುಡಾಯಿತೋಟ ಎಂಬಲ್ಲಿ ಸುಮಾರು 25 ದಲಿತ ಕುಟುಂಬಗಳು ಕೂಲಿ ಜೀವನ ಮಾಡಿಕೊಂಡು 300 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಬೆಳ್ಳಾರೆ ಗ್ರಾಮದ ಸ.ನಂ. 2) ಸುಮಾರು 5-6 ಎಕ್ರೆ ಸ್ಥಳವು ಸರಕಾರಿ ಭೂಮಿಯಾಗಿದ್ದು, ಇದನ್ನು ಸ್ಥಳೀಯ ನಿವಾಸಿಯಾದ ವೆಂಕಟೇಶ ನಾಯಕ್‌ ಎಂಬವರು ಇದು ನನ್ನ ಪಟ್ಟ ಜಾಗ ಎಂದು ಹೇಳಿ ಜೆ.ಸಿ.ಬಿ.ಯಿಂದ ಸಮತಟ್ಟು ಮಾಡುತ್ತಿದ್ದು, ಈಗಾಗಲೇ ದಲಿತ ಕುಟುಂಬಗಳು ಈ ಸ್ಥಳದಲ್ಲಿ ಆರಾಧಿಸಿಕೊಂಡು ಬರುತ್ತಿದ್ದ, ದೈವದ ಆರಾಧನ ಕೇಂದ್ರವು ಇದ್ದು, ಇದನ್ನು ಈಗಾಗಲೇ ಕೆಡವಿ ಹಾಕಿರುತ್ತಾರೆ. ಹಾಗೂ ಇವರು ಸ್ವಶಾನಕ್ಕಾಗಿ 0.25 ಎಕ್ರೆ ಸ್ಥಳದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದು, ಈ ಸ್ಥಳವನ್ನು ಕೂಡಾ ಅತಿಕ್ರಮಣ ಮಾಡುವ ಉದ್ದೇಶದಿಂದ ಜೆ.ಸಿ.ಬಿ.ಯಿಂದ ಸಮತಟ್ಟು ಮಾಡುತ್ತಿದ್ದಾರೆ. ಈ ಬಗ್ಗೆ ಬೆಳ್ಳಾರೆ ಗ್ರಾಮ ಕರಣಿಕರಿಗೆ ಮನವಿಯನ್ನು ಸಲ್ಲಿಸಿದ ಮೇರೆಗೆ ಇವರು ಭೇಟಿಯನ್ನು ಕೊಟ್ಟು ಇದರಲ್ಲಿ ಸರಕಾರಿ ಜಾಗವು ಬರುವುದರಿಂದ ಇದನ್ನು ಸರ್ವೆ ಮಾಡಿಸಿದ ನಂತರ ಕೆಲಸವನ್ನು ಪ್ರಾರಂಭ ಮಾಡುವಂತೆ ಸೂಚನೆ ನೀಡಿದ್ದರೂ ಕೆಲಸವನ್ನು ನಿಲ್ಲಿಸಿರುವುದಿಲ್ಲ.

ಆದ್ದರಿಂದ ಈ ಜಾಗವು ಸರ್ವೆ ಆಗುವ ತನಕ ಜೆ.ಸಿ.ಬಿ. ಕೆಲಸವನ್ನು ತಾತ್ಕಾಲಿಕವಾಗಿ ಈ ಕೂಡಲೇ ನಿಲ್ಲಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.