ಕೊರೊನಾ ಸಂದರ್ಭ ಆನ್ ಲೈನ್ ಉಪನ್ಯಾಸ ನೀಡಿದ ಸುಳ್ಯ‌ ನಾಲ್ವರು ಉಪನ್ಯಾಸಕರಿಗೆ ಗೌರವ

0

 

 

ದ. ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಮಂಗಳೂರು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಉಜಿರೆ ಇವರ ಜಂಟಿ ಸಹಭಾಗಿತ್ವದಲ್ಲಿ ಇಂದು ಶ್ರೀ ಸಿದ್ಧವನ ಗುರುಕುಲ ಸಭಾಭವನ ಉಜಿರೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ 2019 ರಲ್ಲಿ ಕೊರೊನಾ ಸಂದರ್ಭದಲ್ಲಿ ಆನ್ ಲೈನ್ ಉಪನ್ಯಾಸ ನೀಡಿದ ಸುಳ್ಯದ ನಾಲ್ವರು ಉಪನ್ಯಾಸಕರು ಸೇರಿದಂತೆ ಜಿಲ್ಲೆಯ 200 ಮಂದಿ ಉಪನ್ಯಾಸಕರು ಹಾಗೂ ನಿವೃತ 18 ಪ್ರಾಚಾರ್ಯರುಗಳನ್ನು ಸನ್ಮಾನಿಸಲಾಯಿತು.

 

ಕೋವಿಡ್ 19 ರ ಸಂದರ್ಭದಲ್ಲಿ ಶಾಲಾ ಕಾಲೇಜುಗಳು ತೆರೆಯದೆ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆ ಉಂಟಾದ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘ ಆಯ್ದ ಉಪನ್ಯಾಸಕರು ಮತ್ತು ಪ್ರಾಂಶುಪಾಲಕರ ಮೂಲಕ YouTube ನಲ್ಲಿ ಸ್ವಯಂಪ್ರೇರಣೆಯಿಂದ ಸಂಭಾವನೆರಹಿತ ತರಗತಿಗಳನ್ನು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಶಿವರಾಮ್, ಬೆಳ್ಳಾರೆ ಪದವಿ ಪೂರ್ವ ‌ಕಾಲೇಜು ಉಪನ್ಯಾಸಕ ಗೌತಮ್ ಕಾಮತ್, ಸುಳ್ಯ ಗಾಂಧಿನಗರ ಪದವಿ ಪೂರ್ವ ಕಾಲೇಜು ಸಮಾಜಶಾಸ್ತ್ರ ಉಪನ್ಯಾಸಕಿ ಪ್ರೇಮಾ, ರಸಾಯನಶಾಸ್ತ್ರ ಉಪನ್ಯಾಸಕ ಸಂತೋಷ್ ರನ್ನು ಸನ್ಮಾನಿಸಲಾಯಿತು.
ಇಂದು ನಡೆದ ಸಮಾವೇಶವನ್ನು ರಾಜ್ಯಸಭೆ ಸದಸ್ಯರು ಹಾಗೂ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ॥ ಡಿ. ವೀರೇಂದ್ರ ಹಗ್ಗಡೆಯವರು ಉದ್ಘಾಟಿಸಿದರು, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಸನ್ಮಾನಿಸಿದರು ಮತ್ತು ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಡಾ। ಎಂ ಮೋಹನ್ ಆಳ್ವ ವಹಿಸಿದ್ದರು.