ಕಲ್ಮಡ್ಕ ಗ್ರಾಮ ಪಂಚಾಯತಿನಲ್ಲಿ ಮಹಿಳಾ ಗ್ರಾಮ ಸಭೆ

0

 

 

ಕಲ್ಮಡ್ಕ ಗ್ರಾಮ ಪಂಚಾಯತಿನಲ್ಲಿ 2022-23 ನೇ ಸಾಲಿನ ಮಹಿಳಾ ಗ್ರಾಮ ಸಭೆಯು ಸೆ.16ರಂದು ಪಡ್ಪಿನಂಗಡಿಯ ನಡ್ಕ ಶಿವಗೌರಿ ಕಲಾಮಂದಿರ ನಡೆಯಿತು. ಗ್ರಾ. ಪಂ. ಅಧ್ಯಕ್ಷೆ ಹಾಜಿರಾ ಗಫೂರ್, ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ, ಪವಿತ್ರ ಕುಧ್ವ, ಮೀನಾಕ್ಷಿ ಕೆ, ಗ್ರಾ. ಪಂ. ಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಪ್ರಮೀಳಾ ಟಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಳ್ಯ ಮಂಜುನಾಥ್, ಪಂಜ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ, ಸ.ಹಿ.ಪ್ರಾ.ಶಾಲೆ ಪಡ್ಪಿನಂಗಡಿಯ ಮುಖ್ಯೋಪಾಧ್ಯಯರು, ಪಂಬೆತ್ತಾಡಿ ಮತ್ತು ಕಲ್ಮಡ್ಕ ಗ್ರಾಮ ಆರೋಗ್ಯ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಘಗಳ ಸದಸ್ಯರುಗಳು‌ ಮತ್ತು ಊರವರು ಉಪಸ್ಥಿತರಿದ್ದರು.