ಹರಿಹರಪಲ್ಲತಡ್ಕದಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ

0

 

ಹರಿಹರಪಲ್ಲತಡ್ಕ ಗ್ರಾಮದಲ್ಲಿ ಇಂದು ಸುಳ್ಯ ತಾಲೂಕು ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಹರಿಹರ ಪಲ್ಲತಡ್ಕ ಗ್ರಾ.ಪಂ ನ ಉಪಾಧ್ಯಕ್ಷ ವಿಜಯ ಕುಮಾರ್ ಅಂಙಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಶಿಲ್ದಾರ್ ಅನಿತಾಲಕ್ಷ್ಮೀ, ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಸಿ.ಡಿ.ಪಿ.ಒ ರಶ್ಮಿ, ತಾಲೂಕು ಆರೋಗ್ಯಾಧಿಕಾರಿ ನಂದಕುಮಾರ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ, ಸುಬ್ರಹ್ಮಣ್ಯ ಎಸ್ ಐ ಮಂಜುನಾಥ, ಸಮಾಜ ಕಲ್ಯಾಣ ಇಲಾಖೆಯ ರವಿಕುಮಾರ್, ಸುಬ್ರಹ್ಮಣ್ಯ ಮೆಸ್ಕಾಂ ಸಹಾಯಕ ಅಭಿಯಂತರರಾದ ವಸಂತ, ಗ್ರಾ.ಪಂ ಸದಸ್ಯರುಗಳಾದ ದಿವಾಕರ ಮುಂಡಾಜೆ, ಪದ್ಮಾವತಿ ಕಲ್ಲೇಮಠ, ಶಿಲ್ಪಾ ಕೊತ್ನಡ್ಕ ವೇದಿಕೆಯಲ್ಲಿದ್ದರು. ನಿಶ್ಮಿತಾ, ಮೇಘನಾ, ಸಿಂಚನಾ ಪ್ರಾರ್ಥನೆ ನೆರೆವೇರಿಸಿದರು. ಹರಿಹರ ಗ್ರಾ.ಪಂ ನ ಪಿಡಿಒ ಪುರುಷೋತ್ತಮ ಸ್ವಾಗತಿಸಿದರು.

LEAVE A REPLY

Please enter your comment!
Please enter your name here