ಅನಾರೋಗ್ಯ ಪೀಡಿತ ಮಗುವಿಗೆ ಚಿಕಿತ್ಸೆ ನೆರವಿಗಾಗಿ ಶಹಜಾನ್ ನಿಲಂಬೂರ್ ಮನವಿಗೆ ನಿರೀಕ್ಷೆಗೂ ಮೀರಿ ಸ್ಪಂದಿಸಿದ ಜನತೆ

0

 

42 ಲಕ್ಷ ಬೇಕಾದಲ್ಲಿ 58 ಲಕ್ಷ ಸಂಗ್ರಹ

ಸುಳ್ಯದಲ್ಲಿ ಸಾರ್ವಜನಿಕರಿಂದ ಶಹಜಾನ್ ತಂಡಕ್ಕೆ ಅಭಿನಂದನೆ

ಸುಳ್ಯ ನಗರ ಸಮೀಪದ ನಾವೂರು ನಿವಾಸಿಯಾದ ಮುನಾಫರ್ ಎಂಬವರ ಕೇವಲ ಎರಡೂವರೆ ವರ್ಷ ಪ್ರಾಯ ಇರುವ ಅಯಿಷಾ ಮಿಝಾ ಎಂಬ ಸಣ್ಣ ಮಗು ತಲ್ಸೀಮಿಯಾ ಮೇಜರ್ ಎಂಬ ಮಾರಕವಾದ ರೋಗದಿಂದ ಬಳಲುತ್ತಿದ್ದು ಆದ್ದರಿಂದ ಆ ಮಗುವಿಗೆ ಅತೀ ತುರ್ತು ಚಿಕಿತ್ಸೆಗೆ ಬೇಕಾಗಿದೆ ಸುಮಾರು ₹40 ಲಕ್ಷ ರೂಪಾಯಿ ಅ ಬೃಹತ್ ಮೊತ್ತವನ್ನು ಸಂಗ್ರಹವನ್ನು ಮಾಡಲು ಪ್ರಖ್ಯಾತ ಚಾರಿಟಿ ಸಮಾಜ ಸೇವಕ ಗ್ಲೋಬಲ್ ಗೀವರ್ಸ್ ಚಾರಿಟಿ ಇದರ ಶಹಜಾನ್ ನಿಲಂಬೂರ್ ಮತ್ತವರ ತಂಡ ಸೆ.9 ರಂದು ಸುಳ್ಯ ಗಾಂಧಿನಗರ ಬೊರುಗುಡ್ಡೆ ಮುನಾಫರ್ ರವರ ಮನೆಗೆ ಭೇಟಿ ನೀಡಿ ವಿಡಿಯೋ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು.

ಅವರ ಮನವಿಯನ್ನು ಸ್ಪಂದಿಸಿ ಇಡೀ ವಿಶ್ವ ಜನತೆ ಕೇವಲ 4 ದಿನದಲ್ಲಿ 58 ಲಕ್ಷ ಗ್ಲೋಬಲ್ ಗೀವರ್ಸ್ ಟ್ರಸ್ಟ್ ಕರ್ನಾಟಕ ಅವರ ಬ್ಯಾಂಕ್ ಖಾತೆಗೆ ಮಗುವಿನ ಚಿಕಿತ್ಸೆ ಗಾಗಿ ನೆರವನ್ನು ನೀಡಿದರು
ಅದಕ್ಕಾಗಿ ಚಾರಿಟಿ ಸಂಸ್ಥೆ ಹೆಸರಿನೊಂದಿಗೆ ಬ್ಯಾಂಕ್ ಖಾತೆಯನ್ನು ತೆರಿದಿದ್ದರು.
ಶಹಜಾನ್ ನಿಲಂಬೂರ್ ಮತ್ತು ಅವರ ತಂಡ ಸುಳ್ಯದಲ್ಲಿ ತಂಗಿ ಅವರಲ್ಲಿರುವ ನೆಟ್ವರ್ಕ್ ನ್ನು ಬಳಸಿ ಮಗುವಿನ ಚಿಕಿತ್ಸೆಗೆ ನೆರವು ಕ್ರೋಡೀಕರಿಸುವ ಕೆಲಸವನ್ನು ಮಾಡಿದರು.

ಮಗುವಿನ ಚಿಕಿತ್ಸೆ ಗೆ ಸೋಮವಾರ ಆಸ್ಪತ್ರೆಗೆ ದಾಖಲು
ಮಾರಕ ರೋಗ ತಲ್ಸಿಮೀಯ ಮೇಜರ್ ಚಿಕಿತ್ಸೆಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಅಸ್ಪತ್ರೆ ಸೋಮವಾರ ದಾಖಲು ಮಾಡಲಾಗುವುದು ಎಂದು ಮಗುವಿನ ತಂದೆ ಮುನಾಫರ್ ತಿಳಿಸಿದ್ದಾರೆ.
ಈ ಚಿಕಿತ್ಸೆಗೆ ಮಗುವಿನ ತಂದೆಯು ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ.
ಮಗುವಿನ ತಂದೆಯ ಶರೀರದಿಂದ ರಕ್ತ‌ ಉತ್ಪಾದನೆ ಮಾಡಲು ಸಹಕಾರಿಯಾಗುವ ಅಂಗ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಮಗುವಿಗೆ ಶಸ್ತ್ರಚಿಕಿತ್ಸೆ ಮೂಲಕ ಜೋಡನೆ ಮಾಡಲಿದೆ ಮೂರರಿಂದ ಐದು ತಿಂಗಳ ಕಾಲ ಚಿಕಿತ್ಸೆ ನಡೆಯಲಿದೆ ಒಂದು ತಿಂಗಳ ಚಿಕಿತ್ಸೆ ನಂತರ ಶಸ್ತ್ರ ಚಿಕಿತ್ಸೆ ನಡೆಯವುದು ಎಂದು ಆಸ್ಪತ್ರೆ ವೈದ್ಯರ ಜೊತೆ ಸಂಪರ್ಕದಲ್ಲಿರುವ ಶಹಜಾನ್ ನಿಲಂಬೂರ್ ಅವರ ತಂಡದ ಕರ್ನಾಟಕ ಕನ್ವಿನರ್ ಜಾಬೀರ್ ನಿಝಾಮಿ ತಿಳಿಸಿದರು.

ಶಹಜಾನ್ ತಂಡಕ್ಕೆ ಸಾರ್ವಜನಿಕ ಸನ್ಮಾನ
ಮಗುವಿನ ಚಿಕಿತ್ಸೆಗೆ ನೆರವು ಸಂಗ್ರಹಿಸುವ ಕೆಲಸವನ್ನು ಪೂರ್ತಿಗೊಳಿಸಿ ತಮ್ಮ ತವರೂರಿಗೆ ಹೊರಟ ಶಹಜಾನ್ ಮತ್ತು ಅವರ ತಂಡವನ್ನು ಸುಳ್ಯ ಜನತೆ ಪರವಾಗಿ ಸಾರ್ವಜನಿಕ ಅಭಿನಂದನ ಕಾರ್ಯಕ್ರಮ ಮಾಡಿ ಸೆ.17 ರಂದು ಸುಳ್ಯ ಗ್ಲೋಬಲ್ ಟೈಲ್ಸ್ ‌ಮಳಿಗೆ ಮುಂಬಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಎಂ ಬಿ ಫೌಂಡೇಷನ್ ಅಧ್ಯಕ್ಷ ಎಂ ಬಿ ಸದಾಶಿವ ರವರು ಅಭಿನಂದಸಿ ಮಾತನಾಡಿದರು.
ಶಹಜಾನ್ ಮುಮ್ತಾಜ್ ಪ್ರೀತಿಗಾಗಿ ತಾಜ್ ಮಹಲ್ ಕಟ್ಟಿಸಿ ತನ್ನ ಪ್ರೀತಿ ತೊರ್ಪಡಿಸಿದರೆ ನಮ್ಮ ಶಹಜಾನ್ ಮುಗ್ಧ ಮಗುವಿನ ಪ್ರಾಣರಕ್ಷಣೆ ಕೆಲಸವನ್ನು ಮಾಡಿ ಸುಳ್ಯ ಜನತೆಯ ಶಾಶ್ವತ ಪ್ರೀತಿ ಗಿಟ್ಟಿಸಿದ್ದಾರೆ ಇವರು ಮಾಡಿದ ಕೆಲಸ ಒಂದು ಪವಾಡ ಇಂತಹ ಕೆಲಸವು ಯುವಜನತೆ ಮಾದರಿಯಾಗಲಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಹಜಾನ್ ನಾನು ಮತ್ತು ನಮ್ಮ ತಂಡಕ್ಕೆ ಸುಳ್ಯದ ಆಯಿಶತ್ತ್ ಮಿಝಾ ಳ ಪುಟ್ಟ ಹೆಣ್ಣುಮಗಳ ಚಿಕಿತ್ಸೆ ನೆರವು ಯಾಚಿಸಬೇಕು ಮನವಿ ಬಂತು ಆ ಮನವಿಯನ್ನು ನಮ್ಮ ಟ್ರಸ್ಟ್ ನ ವೈದ್ಯರ ತಂಡದ ಮೂಲಕ ವಿಚಾರಿಸಿದೆವು ವೈದ್ಯರ ಸಲಹೆಯನ್ನು ಪಡೆದುಕೊಂಡೆವು ಚಿಕಿತ್ಸೆ ಮಾಡಿದರೆ ಆ ಮಗು ಬದುಕಬಹುದು ಆ ಕೆಲಸ ಮೂರು ತಿಂಗಳಲ್ಲಿ ಪೂರ್ತಿಯಾಗಬೇಕು ಎಂಬ ಸಲಹೆ ನೀಡಿದರು.
ವೈದ್ಯರ ಸಲಹೆ ಮೆರೆಗೆ ನಮ್ಮ ತಂಡ ಸುಳ್ಯಕ್ಕೆ ಬಂದು ಚಿಕಿತ್ಸೆ ನೆರವು ಯಾಚಿಸಿದ್ದೇವು ನಮ್ಮ ಮನವಿ ಸುಳ್ಯ ಮಹಾಜನತೆಯೊಂದಿಗೆ ಇಡೀ ವಿಶ್ವದ ಜನತೆ ಕೈಜೋಡಿಸಿತು ಆದರಿಂದ ನಮ್ಮ ನಿರೀಕ್ಷೆಮೀರಿ ಧನ‌ ಸಂಗ್ರಹಮಾಡಲಿಕ್ಕೆ ಸಾಧ್ಯವಾಯಿತು ಸಹಕರಿಸಿದ ಸರ್ವರಿಗೂ ನನ್ನ ಸುಳ್ಯ ಜನತೆಯ ಪರವಾಗಿ ಕೃತಜ್ಞತೆ ಅರ್ಪಿಸುತ್ತೆನೆ ಎಂದರು.
ಶಹಜಾನ್ ರವರ ವಿಡಿಯೋದಲ್ಲಿ ಮಗುವಿನ ಚಿಕಿತ್ಸೆಗಾಗಿ ಮನವಿ ಮಾಡಿದರಲ್ಲಿ ಸಹಕರಿಸಿದ
ಶಹಜಾನ್ ತಂಡದ ಸದಸ್ಯರಾದ ಅನೀಲ್ ಪಪನ್ ,ಜಾಬೀರ್ ನಿಝಾಮಿ, ,ವಿನು,ರಜಾಕ್ ಕುಶಾಲನಗರ,ಬಶೀರ್ ಈಶ್ವರಮಂಗಲ ಇವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.


ಶಹಜಾನ್ ನಿಲಂಬೂರ್ ಅವರು ಸುಳ್ಯಕ್ಕೆ ಕರೆ ತಂದು ಮಗುವಿನ ಮಗುವಿನ ಚಿಕಿತ್ಸೆ ನೆರವು ಕಾರ್ಯಕ್ಕೆ ವಿಶೇಷವಾಗಿ ಸಹಕರಿಸಿದ ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್ ,ಇಬ್ರಾಹಿಂ ಹಾಜಿ ಕತ್ತಾರ್,ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಕೆ ಎಂ ಮುಸ್ತಫಾ, ಸಾಮಾಜಿಕ ಕಾರ್ಯಕರ್ತ ಶಮೀರ್ ಮೊಬೈಲ್ ಹಾರ್ಟ್ ಇವರಿಗೆ ಶಹಜಾನ್ ನಿಲಂಬೂರ್ ವಿಶೇಷ ಅಭಿನಂದನೆ ಸಲ್ಲಿಸಿ ಸಹಕರಿಸಿ ಜನತೆಯೊಂದಿಗೆ ನನ್ನ ಈ ಕಾರ್ಯದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರೂ ಬೇರೆ ಊರಿನ ಇಂತಹ ಮಕ್ಕಳಿಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು..
,ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್,ಗಾಂಧಿ ನಗರ ಜಮಾಯತ್ ಕಮಿಟಿ ಮಾಜಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ,ಶಾರದಾಂಬ ಸೇವಾ ಸಮಿತಿ ಗೌರವಧ್ಯಕ್ಷ ಗೋಕುಲ್ ದಾಸ್, ಶಶಿಧರ ಎಂ ಜೆ ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ,ಅನ್ಸಾರ್ ಅಧ್ಯಕ್ಷ ಹಾಜಿ ಶುಕೂರ್,ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್,ಕಾರ್ಯದರ್ಶಿ ಲತೀಫ್ ಹರ್ಲಡ್ಕ ,ಹಲವಾರು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದರು.