ನೆಲ್ಲೂರು ಕೆಮ್ರಾಜೆ : ಪೋಷಣ್ ಮಾಸಾಚರಣೆ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ನೆಲ್ಲೂರು ಕೆಮ್ರಾಜೆ, ಸ್ಪಂದನ ಸ್ತ್ರೀ ಶಕ್ತಿ ಗೊಂಚಲು ಇವರ ಸಂಯುಕ್ತ ಆಶ್ರಯದಲ್ಲಿ ಸೆ. 8 ರಂದು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ, ಪೋಷಣ್ ಮಾಸಾಚರಣೆ, ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ ಹಾಗೂ ಪ್ರೋಟೀನ್ ಪೌಡರ್ ವಿತರಣೆ ಕಾರ್ಯಕ್ರಮ ನಡೆಯಿತು.

ಗುತ್ತಿಗಾರು ವಲಯ ಮೇಲ್ವಿಚಾರಕಿ ಶ್ರೀ ಮತಿ ಉಷಾ ಕಾರ್ಯಕ್ರಮ ದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಶೀಲಾವತಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ವೇದಿಕೆಯಲ್ಲಿ ನೆಲ್ಲೂರು ಕೇಮ್ರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾದ ವಿಷ್ಣು ಭಟ್, ಕಾರ್ಯ ನಿರ್ವಹಣಾಧಿಕಾರಿ ಸಂತೋಷ್ ಕುಮಾರ್, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಪದ್ಮಾ ವೇಣಿ, ಗ್ರಾಮ ಪಂಚಾಯತ್ ಸದಸ್ಯ ರಾಮ ಚಂದ್ರ ಪ್ರಭು, ಗೊಂಚಲಿನ ಅಧ್ಯಕ್ಷ ರಾದ ಶ್ರೀಮತಿ ನಳಿನಿ, ಸ.ಹಿ.ಪ್ರಾ. ಶಾಲೆ ನಾರ್ಣಕಜೆ ಮುಖ್ಯೋಪಾಧ್ಯಾಯ ರಾದ ಶ್ರೀಮತಿ ಪೂರ್ಣಿಮಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆ ಯ ಸಿ.ಹೆಚ್.ಒ, ಕಿರಿಯ ಆರೋಗ್ಯ ಸುರಕ್ಷಾ ಧಿಕಾರಿ ಶ್ರೀಮತಿ ರೇವತಿ, ಸ್ತ್ರೀ ಶಕ್ತಿ ಸದಸ್ಯರು, ಪೋಷಕರು, ಮಕ್ಕಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಾರ್ಯಕ್ರಮ ದಿಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಕ್ಕೆ ಪ್ರೋಟೀನ್ ಪವುಡರ್ ನನ್ನು ಕ್ರಿಷಿಪತ್ತಿನ ಸಹಕಾರಿ ಸಂಘದ ವತಿಯಿಂದ ನೀಡಿ ಸಹಕರಿಸಿದರು. ಪೌಷ್ಟಿಕ ಆಹಾರ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 1-2 ವರ್ಷ ದ ಹೆಣ್ಣು ಮಕ್ಕಳ ಶಿಶುಪ್ರದರ್ಶನ ನಡೆಸಿ ಬಹುಮಾನ ವಿತರಿಸಲಾಯಿತು. ನಾರ್ಣಕಜೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಅನಿತಾ ಕಾರ್ಯಕ್ರಮ ನಿರೂಪಿಸಿದರು, ಉಷಾಬೊಳ್ಳಾಜೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ದೇವಕಿ ಸ್ವಾಗತಿಸಿ, ಗಟ್ಟಿಗಾರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಾಧಮ್ಮ ಧನ್ಯವಾದ ಸಮರ್ಪಿಸಿದರು.