ಅನ್ಸಾರಿಯಕ್ಕೆ ಶಹಜಾನ್ ನೀಲಂಬೂರ್ ನೇತ್ರತ್ವದ ಗ್ಲೋಬಲ್ ಗೀವರ್ಸ್ ಕರ್ನಾಟಕ ತಂಡ ಭೇಟಿ

0

 

ಸುಳ್ಯದ ಗಾಂಧಿನಗರ ನಾವೂರಿನ ಮುನಾಫರ್ ಎಂಬವರ ಮಗಳ ಚಿಕಿತ್ಸೆ ನೆರವು ಯಾಚಿಸಲು ಸುಳ್ಯಕ್ಕೆ ಆಗಮಿಸಿದ ಖ್ಯಾತ ಸಮಾಜ ಸೇವಕ ಗ್ಲೋಬಲ್ ಗಿವರ್ಸ್ ಕರ್ನಾಟಕ ಇದರ ಮುಖ್ಯಸ್ಥ ಶಹಜಾನ್ ನೀಲಂಬೂರ್ ಮತ್ತು ಅವರ ತಂಡ ಸುಳ್ಯ ನಾವೂರು ಜಟ್ಟಿಪಳ್ಳ ರಸ್ತೆಯಲ್ಲಿ ಕಾರ್ಯಚರಿಸುತ್ತಿದ್ದ ಅನ್ಸಾರಿಯ ಎಜುಕೇಶನ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಸುಳ್ಯ ಉದ್ಯಮಿ ಹಾಜಿ ಇಬ್ರಾಹಿಂ ಕತ್ತಾರ್,ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್,ಶರೀಫ್ ಕಂಠಿ, ಅನ್ಸಾರ್ ಅಧ್ಯಕ್ಷ ಶುಕೂರ್ ಹಾಜಿ, ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಗ್ಲೋಬಲ್ ಗೀವರ್ಸ್ ಕರ್ನಾಟಕ ಕಾರ್ಯದರ್ಶಿ ಅನೀಲ್ ಪಪನ್ ,ಅನ್ಸಾರಿಯ ಉಸ್ತಾರು,ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.
ಗ್ಲೋಬಲ್ ಗೀವರ್ಸ್ ಕರ್ನಾಟಕ ಇದರ ನಿರ್ದೇಶಕ ನಿಝಾಮಿ ಯವರು ಶಹಜಾನ್ ನಿಲಂಬೂರ್ ಅವರ ಚಾರಿಟಿ ಕೆಲಸದ ಬಗ್ಗೆ ಮಾತನಾಡಿದರು.
ಅನ್ಸಾರಿಯ ಆಡಳಿತ ಸಮಿತಿ ಪರವಾಗಿ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಶಹಜಾನ್ ನಿಲಂಬೂರ್ ಅವರನ್ನು ಗೌರವಿಸಿ ಅಭಿನಂದಿಸಿದರು.
ಅನ್ಸಾರಿಯ ಖತೀಬರಾದ ಉಮ್ಮರ್ ಮುಸ್ಲಿಯಾರ್ ದುವಾ ಮಾಡಿದರು. ಅನ್ಸಾರಿಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಸ್ವಾಗತಿಸಿ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here