ಅರಂತೋಡು :ಬಿ ಜೆ ಪಿ ಮಹಿಳಾ ಮೋರ್ಚಾದ ವತಿಯಿಂದ ಮೋದಿಜಿಯವರ ಜನ್ಮ ದಿನಾಚರಣೆ

0

 

 

ಭಾರತೀಯ ಜನತಾ ಪಾರ್ಟಿ ಸುಳ್ಯ ಮತ್ತು ಬಿ ಜೆ ಪಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ನರೇಂದ್ರ ಮೋದಿಜಿಯವರ 72ನೇ ಹುಟ್ಟುಹಬ್ಬದ ಜನ್ಮ ದಿನಾಚರಣೆಯು ಅರಂತೋಡಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಶ್ರಮಿಸುತ್ತಿರುವ ಘನತ್ಯಾಜ್ಯ ಘಟಕದ 4 ಮಂದಿ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು.ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ,ಬಿ ಜೆ ಪಿ ಮಂಡಲದ ಕೋಶಾಧಿಕಾರಿ ಶಿವಾನಂದ ಕುಕ್ಕುಂಬಳ ,ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್ , ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಹರಿಣಿ ಡಿ, ಸೊಸೈಟಿ ನಿರ್ದೇಶಕರು ಕೇಶವ ಅಡ್ತಲೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ವೇತಾ,ಪಂಚಾಯತ್ ಸದಸ್ಯರಾದ ವೇಣು ಪೆತ್ತಜೆ ಮಾಜಿ ತಾ. ಪಂ.ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಮೇದಪ್ಪ, ವಿಶ್ವ ಹಿಂದು ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ನಿವೃತ್ತ ಪ್ರಾoಶುಪಾಲ ಗಂಗಾಧರ ಕೆ, ನಿವೃತ್ತ ಮಾಸ್ಟರ್ ಜತ್ತಪ್ಪ ಅಳಿಕೆ, ಬಿಜೆಪಿ ಕಾರ್ಯಕರ್ತ ಶಂಕರ್ ಲಿಂಗಂ, ದೀಪಕ್ ಪೈಕ ,ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here