ಕ್ರಿಯಾಯೋಜನೆ ಬದಲಾವಣೆ ಕುರಿತ ಗ್ರಾ. ಪಂ. ಸದಸ್ಯ ಅನಿಲ್ ಬಳ್ಳಡ್ಕ ಆರೋಪಕ್ಕೆ ಉಪಾಧ್ಯಕ್ಷ ಪ್ರಶಾಂತ ಪಾನತ್ತಿಲ ಪ್ರತಿಕ್ರಿಯೆ

0

 

ಅಧ್ಯಕ್ಷರು ಮತ್ತು ಪಿ.ಡಿ.ಒ.ರೊಂದಿಗೆ ಕೇಳಬೇಕು

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್‌ನಲ್ಲಿ ಕ್ರಿಯಾಯೋಜನೆ ಬದಲಾವಣೆ ಕುರಿತು ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ ಪಾನತ್ತಿಲ ಆದ ನನ್ನ ಮೇಲೆ ತಪ್ಪು ಕಲ್ಪನೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಹರಿಯಬಿಟ್ಟಿದ್ದಾರೆ.


ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸಹಿತ ಸದಸ್ಯರ ಸಮ್ಮುಖದಲ್ಲಿ ಪಂಚಾಯತ್ ಕ್ರಿಯಾಯೋಜನೆ ಅಂತಿಮಗೊಳಿಸಲಾಗಿದೆ. ಆದರೆ ತದನಂತರ ಕ್ರಿಯಾಯೋಜನೆ ಬದಲಾಗಿರುವುದು ಗಮನಕ್ಕೆ ಬಂದಿದೆ.
ಪಂಚಾಯತ್‌ನ 3 ವಾರ್ಡ್‌ಗಳ ಅನುದಾನ ಕಡಿತಗೊಂಡಿರುತ್ತದೆ. ಇದು ಯಾವ ರೀತಿ ಆಗಿದೆ ಎಂಬುದು ಅಧ್ಯಕ್ಷರು ಮತ್ತು ಪಿ.ಡಿ.ಒ.ರಲ್ಲಿ ವಿಚಾರಿಸಬೇಕೆ ಹೊರತು ಉಪಾಧ್ಯಕ್ಷರಲ್ಲಿ ಅಲ್ಲ. ಯಾಕೆಂದರೆ ಕ್ರಿಯಾಯೋಜನೆಗೆ ಸಹಿ ಮಾಡುವುದು ಅಧ್ಯಕ್ಷರು ಮತ್ತು ಪಿಡಿಓ. ಗ್ರಾಮ ಪಂಚಾಯತ್ ಸದಸ್ಯರಾದವರಿಗೆ ಇಂತಹ ಕನಿಷ್ಠ ಜ್ಞಾನ ಇರಬೇಕು. ಆದರೂ ದುರುದ್ದೇಶದಿಂದ ನನ್ನ ಬಗ್ಗೆ ತಪ್ಪು ಕಲ್ಪನೆ ಬರುವ ರೀತಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಹರಿಯಬಿಟ್ಟಿರುವುದನ್ನು ಖಂಡಿಸುತ್ತೇನೆ ಎಂದು ಪ್ರಶಾಂತ್ ಪಾನತ್ತಿಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.