ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

 

104 ಕೋಟಿಗೂ ಮಿಕ್ಕಿ ವ್ಯವಹಾರ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22 ನೇ ಸಾಲಿನವಾರ್ಷಿಕ ಮಹಾಸಭೆಯು ಸೆ.18 ರಂದು ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು.

 

ಸಂಘವು ರೂ.104ಕೋಟಿ 39 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.13,07,711.74 ನಿವ್ವಳ ಲಾಭಗಳಿಸಿದೆ.ರೂ.1,94,64,631.13 ವಿವಿಧ ನಿಧಿಗಳಿವೆ.ರೂ.13,78,65,812.25 ವಿವಿಧ ಠೇವಣಾತಿಗಳು ಇದೆ. ಆಡಿಟ್ ವರ್ಗೀಕರಣದಲ್ಲಿ ತರಗತಿಯಲ್ಲಿ ಸಂಸ್ಥೆಯು ‘ಎ”ಮುನ್ನಡೆಯುತ್ತಿದೆ.ಎಂದು ಅವರು ಹೇಳಿದರು. ಶೇ.4 ಡಿವಿಡೆಂಡ್ ಘೋಷಿಸಲಾಯಿತು.ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಎನ್ ಜಿ, ನಿರ್ದೇಶಕರಾದ ಎ ಗಂಗಾಧರ ಗೌಡ, ಮಹಾಬಲ ಕೆ, ನಾರಾಯಣ ಕೆ ಕೆ, ಶ್ರೀಮತಿ ಸುಧಾ ಎಸ್ ಭಟ್, ಶ್ರೀಮತಿ ಲಲಿತ ಪಿ, ಮಹಮ್ಮದ್ ಹನೀಫ್, ರಾಮ ನಾಯ್ಕ ಎಂ, ಕರುಣಾಕರ ಜೆ, ಶೇಷಪ್ಪ ಎ ವಿ, ಮೋಹನ ಕೆ ಕೆ,ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
*ಹೊಸ ಯೋಜನೆಗಳು:*
ಸಂಘದ ಸದಸ್ಯರಿಗೆ ಸಹಕಾರವಾಗುವ ನಿಟ್ಟಿನಲ್ಲಿ ನೆಪ್ಟ್ ,ಆರ್ ಟಿ ಜಿ ಎಸ್ ಬ್ಯಾಂಕಿಂಗ್ ಸೇವೆ, ಸದಸ್ಯರ‌‌ ಕೃಷಿ ಕ್ಷೇತ್ರಕ್ಕೆ ಸಂಘದ ವತಿಯಿಂದ ಜಾಬ್ ವರ್ಕ್ ತಂಡ ,ಗ್ರಾಹಕ ವ್ಯಾಪಾರ ವಿಭಾಗವನ್ನು ಗ್ರಾಹಕ ಸ್ನೇಹನ್ನಾಗಿಸಿ ಜೀವನಾವಶ್ಯಕ ಹಾಗೂ ಕೃಷಿ ಸಂಬಂಧಿಸಿದ ಸಾಮಗ್ರಿಗಳನ್ನು ಒಂದೇ ಸೂರಿನಡಿ ದೊರೆಯುವಂತೆ ಮಾಡುವುದು,ಕೃಷಿ ಯಂತ್ರೋಪಕರಣ ಬಾಡಿಗೆ ವಿಭಾಗವನ್ನು ತೆರೆದು ಸದಸ್ಯರಿಗೆ ಮಿತ ದರದಲ್ಲಿ ಬಾಡಿಗೆಗೆ ನೀಡುವುದು. ಸದಸ್ಯರಲ್ಲಿ ಉಳಿತಾಯ ಮನೋಭಾವವನ್ನು ಹೆಚ್ಚಿಸಲು ಸ್ವ ಸಹಾಯ ಗುಂಪು, ಪಿಗ್ಮಿ -ಲಕ್ಷ್ಮೀ ಠೇವಣಾತಿ ಸಂಗ್ರಹಣೆ ಯೋಜನೆಯನ್ನು ಪ್ರಧಾನ ಕಚೇರಿಯಲ್ಲಿ ಪ್ರಾರಂಭಿಸುವುದು. ಮೊದಲಾದ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು.
*ಸನ್ಮಾನ:*
ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕರಾಗಿ ಸುಧಿರ್ಘ ಕಾಲ ಸೇವೆಗಾಗಿ ನಿವೃತ್ತ ಅಂಚೆ ವಿತರಕ ಯು ಸಾಂತಪ್ಪ ನಾಯ್ಕ ಉಡುವೆಕೋಡಿ, ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಉದಾರ ಸೇವೆಗಾಗಿ ಗೌರವ ಶಿಕ್ಷಕ ಶ್ರೀನಿವಾಸ ಜೋಗಿಬೆಟ್ಟು, ಸಹಕಾರಿ ಕ್ಷೇತ್ರದ ಸುಧೀರ್ಘ ಸೇವೆಗಾಗಿ ಕಲ್ಮಡ್ಕ ಹಾ.ಉ.ಸ.ಸಂಘದ ನಿವೃತ್ತ ಕಾರ್ಯದರ್ಶಿ ಎಸ್ ಶ್ಯಾಮ್ ಭಟ್ ಕೆರೆಮೂಲೆ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಾರಾಯಣ ಪ್ರಾರ್ಥಿಸಿದರು. ಲಕ್ಷ್ಮೀನಾರಾಯಣ ಎನ್ ಜಿ ಸ್ವಾಗತಿಸಿದರು. ಕಳೆದ ಸಾಲಿನ ವರದಿಯನ್ನು ವ್ಯವಸ್ಥಾಪಕಿ ಶ್ರೀಮತಿ ಪೂವಕ್ಕ ಪಿ ವಾಚಿಸಿದರು.ಪುನೀತ್ ಮೂಲೆಮನೆ ನಿರೂಪಿಸಿದರು. ಪ್ರಸ್ತುತ ಸಾಲಿನ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವಾಚಿಸಿದರು ಮತ್ತು ವಂದಿಸಿದರು.