ಮುರುಳ್ಯ ಎಣ್ಮೂರು ಸೊಸೈಟಿಯ ವಾರ್ಷಿಕ ಮಹಾಸಭೆ

0

ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಲೆಕ್ಕಾಡಿ ಇದರ 2021- 22ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ ೧೮ ರಂದು ಸಂಘದ ಪ್ರಧಾನ ಕಚೇರಿಯ ಸಾಧನಾ ಸಹಕಾರ ಸೌಧ ನಿಂತಿಕಲ್ಲಿನಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ವಸಂತ ಹುದೇರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಬೆಳವಣಿಗೆ ಸದಸ್ಯರ ಸಹಕಾರ ಅಗತ್ಯ. ಕೃಷಿಕರಾದ ತಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಕಳೆದ 2021- 22ನೇ ಸಾಲಿನಲ್ಲಿ 6390974.28 ಪೈಸೆ ಲಾಭ ಗಳಿಸಿದೆ. ಸದಸ್ಯರಿಗೆ 5% ಡಿವಿಡೆಂಡ್ ನೀಡಲಾಗುವುದು. ಎಂದರು ಹೆಚ್ಚಿನ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಕೃಷಿಕ ಸುಂದರ ಗೌಡ ಆರೆಂಬಿ ದೀಪ ಪ್ರಜ್ವಲನೆ ಮಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಕುಸುಮಾವತಿ ರೈ ಎಣ್ಮೂರು ಗುತ್ತು, ನಿರ್ದೇಶಕರುಗಳಾದ ರಘುನಾಥ ರೈ ಎಣ್ಮೂರು, ವಸಂತ ನಡುಬೈಲು, ರೂಪರಾಜ ರೈ ಕೆ., ಭಾಗೀರಥಿ ಮುರುಳ್ಯ, ರಾಜಶೇಖರ ಶೃಂಗೇರಿ, ದಿನೇಶ್ ಎಚ್, ಪುರುಷೋತ್ತಮ ಆಚಾರ್ಯ ಕುಕ್ಕಟ್ಟೆ, ದಿನೇಶ್ ಎ. ಪಜಿಂಬಿಲ, ಶೇಖರ ಎ., ಶ್ರೀಮತಿ ನಳಿನಿ ಸೀತಾರಾಮ ರೈ ಊರುಸಾಗು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್. ಸಭೆಯ ಕಾರ್ಯಕಲಾಪ ನಡೆಸಿ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕ ಸುಧೀನ್ ಕುಮಾರ್ ರೈ, ಹರ್ಷಿತಾ ಪಿ.ಸಿ., ಶ್ರೀಮತಿ ಆಶಾ ಕಿರಣ, ಸಿಬ್ಬಂದಿಗಳಾದ ರಮೇಶ್ ಎ., ಸುಭಾಶ್ಚಂದ್ರ ರೈ ಕೆ., ದೇವಿಪ್ರಸಾದ್ ಹೆಚ್., ವಸಂತ ರೈ ಕೆ., ಗಂಗಾಧರ ಕೆ. ಸಹಕರಿಸಿದರು. ವಿದ್ಯಾರ್ಥಿನಿಯರಾದ ಶ್ರೇಯಾ ಮತ್ತು ಬಳಗ ಪ್ರಾರ್ಥಿಸಿದರು. ಶೈಕ್ಷಣಿಕ ಹಾಗೂ ಇನ್ನಿತರ ವಿಷಯಗಳಿಗಾಗಿ ಸಂಘದ ಸದಸ್ಯರ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸುದೀನ್ ಕುಮಾರ್ ರೈ ವಂದಿಸಿದರು.
( ವರದಿ ಎಎಸ್ಎಸ್ ಅಲೆಕ್ಕಾಡಿ)