ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ವಾರ್ಷಿಕ ಮಹಾಸಭೆ

0

 

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಸುಳ್ಯ ಇದರ 2021. 22ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಸೆಪ್ಟೆಂಬರ್ 18ರಂದು ಗಾಂಧಿನಗರ ನಾಯರ್ ವಾಣಿಜ್ಯ ಸಂಕೀರ್ಣ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಐ ಕೆ ಮಹಮ್ಮದ್ ಇಕ್ಬಾಲ್ ಎಲಿಮಲೆ ವಹಿಸಿದ್ದರು. ಸಭೆಯ ಆರಂಭಕ್ಕೂ ಮುನ್ನ ಸಂಘದ ಅಗಲಿದ ಸದಸ್ಯರುಗಳಿಗೆ ನುಡಿ ನಮನ ಮತ್ತು ಒಂದು ನಿಮಿಷದ ಮೌನಚರಣೆ ನಡೆಯಿತು. ಸಂಘದ ನಿರ್ದೇಶಕ ಆರ್ ಕೆ ಮಹಮ್ಮದ್ ಈ ಕಾರ್ಯಕ್ರಮವನ್ನು ನಡೆಸಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಕಳೆದ ಸಾಲಿನ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ, ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ವಿವರಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ ನಿರ್ದೇಶಕರು ಮತ್ತು ಮಾಜಿ ಅಧ್ಯಕ್ಷರುಗಳು, ಸಂಘದ ಪ್ರೋತ್ಸಾಹಕರು, ಸದಸ್ಯರ ಸಹಕಾರದಿಂದ ಸಂಸ್ಥೆ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಂಘದ ಶಾಖೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಶ್ವರಮಂಗಲ ಮತ್ತು ಗಾಳಿಮುಖದಲ್ಲಿ ನೂತನ ಶಾಖೆಗಳನ್ನು ತೆರೆಯುವ,ಮತ್ತು ಸಂಘದ 25ನೇ ವರ್ಷದ ಅಂಗವಾಗಿ ಸಂಘಕ್ಕೆ ಸ್ವಂತ ಕಟ್ಟಡವನ್ನು ನಿರ್ಮಿಸುವ ಕಾರ್ಯಯೋಜನೆಗಳನ್ನು ರೂಪಿಸಿರುವ ಬಗ್ಗೆ ವಿವರಿಸಿದರು.
ನಂತರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ಐ ಕಾರ್ಯ ಸೂಚಿ ಮತ್ತು ವರದಿ ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರುಗಳಾದ ಬಾಪು ಸಾಹೇಬ್ ಅಂಬೂರು, ಟಿ ಎಂ ಶಹೀದ್, ಮಾಜಿ ಕಾರ್ಯದರ್ಶಿ ಅಬೂಬಕ್ಕರ್, ರಿಯಾಜ್ ಕಟ್ಟೆಕರ್, ಹಾಜಿ ಮುಸ್ತಫಾ ಜನತಾ, ಅಬ್ದುಲ್ ರಹೀಮ್ ಫ್ಯಾನ್ಸಿ, ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಫಮಿದಾ ಸಂಸುದ್ದಿನ್ ಮತ್ತು ಸಂಘದ ಸದಸ್ಯರುಗಳು, ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕಿನಲ್ಲಿ ಎನ್ ಇ ಇ ಟಿ ಪರೀಕ್ಷೆಯಲ್ಲಿ ಉತ್ತಮ ದರ್ಜೆ ಪಡೆದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 620 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮುಹಿಯದ್ದೀನ್ ಹಾಜಿ ಕೆಎಂ, ನಿರ್ದೇಶಕರುಗಳಾದ ಸಂಶುದ್ದೀನ್ ಎಸ್ ಅರಂಬೂರು, ಇಸ್ಮಾಯಿಲ್ ಕೆ ಎಂ ಪಡಿಪಿನಂಗಡಿ, ಹಸೈನಾರ್ ಎ ಕೆ ಕಲ್ಲುಗುಂಡಿ, ಉಮ್ಮರ್ ಶಾಪಿ ಕುತ್ತಮಟ್ಟೆ, ಜಾರ್ಜ್ ಡಿಸೋಜಾ, ಆಮಿನ ಎಸ್ ಜಯನಗರ, ಜೂಲಿಯಾನ ಕ್ರಾಸ್ತಾ ಬೀರಮಂಗಲ ಉಪಸ್ಥಿತರಿದ್ದರು.
ಅಧ್ಯಕ್ಷ ಇಕ್ಬಾಲ್ ಎಲಿಮಲೆ ಸ್ವಾಗತಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂಘದ ಸಿಬ್ಬಂದಿಗಳು ಸಹಕರಿಸಿದರು.