ಕುದ್ಕುಳಿ ಗುಡ್ಡಪ್ಪ ಪೂಜಾರಿಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

0

 

 

ಆಲೆಟ್ಟಿ ಗ್ರಾಮದ ಕುದ್ಕುಳಿ ಗುಡ್ಡಪ್ಪ ಪೂಜಾರಿ ಯವರು ಸೆ.8 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಸೆ.18 ರಂದು ಸುಳ್ಯ ಕೆ.ವಿ.ಜಿ.ಪುರಭವನದಲ್ಲಿ ನಡೆಯಿತು.

 

 

 

ಮೃತರ ಜೀವನಗಾಥೆಯ ಕುರಿತು ಆಲೆಟ್ಟಿ ಸೊಸೈಟಿ ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ ಯವರು ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಯಶೋಧ ಕುದ್ಕುಳಿ, ಪುತ್ರ ಲಕ್ಷ್ಮಣ ಪೂಜಾರಿ ಕುದ್ಕುಳಿ, ಪುತ್ರಿಯರಾದ ಶ್ರೀಮತಿ ಭಾರತಿ, ಶ್ರೀಮತಿ ಕುಮುದಾ, ಸೊಸೆ ಶ್ರೀಮತಿ ಪುಷ್ಪಾ, ಅಳಿಯಂದಿರಾದ ಪದ್ಮನಾಭ ಪೂಜಾರಿ, ಮೋನಪ್ಪ ಪೂಜಾರಿ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಕೋರಿದರು.