ತೊಡಿಕಾನ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಸಹಿತ ಲಕ್ಷ ತುಳಸಿ ಅರ್ಚನೆ : ಸಾವಿರಾರು ಮಂದಿ ಭಕ್ತರು ಭಾಗಿ

0

 

ಸುಳ್ಯ ಸೀಮೆ ದೇವಸ್ಥಾನದವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಸಹಿತ ಲಕ್ಷ ತುಳಸಿ ಅರ್ಚನೆಯು ಸೆ.೧೮ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ವೇದಮೂರ್ತಿ ಪುರೋಹಿತ ರವಿಕುಮಾರ್ ಭಟ್ ಕಡುಮನೆಯವರ ನೇತೃತ್ವದಲ್ಲಿ ನಡೆದ ಈ ಪೂಜಾ ಕಾರ್ಯದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಹಾಗೂ ಸಮಿತಿ ಸದಸ್ಯರು, ಭಜನಾ ಸಂಘದ ಅಧ್ಯಕ್ಷ ಚಂದ್ರಶೇಖರ ಎ.ಎಸ್., ಕಾರ್ಯದರ್ಶಿ ಸುರೇಶ್ ಡಿ, ಖಜಾಂಜಿ ಭವಿತ್ ಬಿ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹಾಗೂ ನಿರ್ದೇಶಕರು, ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ಹಾಗೂ ಸದಸ್ಯರು, ಧರ್ಮಸ್ಥಳ ಸಂಘ, ವಿವಿಧ ಭಜನಾ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.

 

LEAVE A REPLY

Please enter your comment!
Please enter your name here