ಜಂಬೋ ಜೆಟ್ ವಿಮಾನದ ಮೂಲಕ ದೇಶಕ್ಕೆ ಬಂದ ಅಷ್ಟ ಚೀತಾ

0

 

ದೇಶಕ್ಕೆ ಕರೆತರುವ ತಂಡದಲ್ಲಿ ಡಾ.ಸನತ್ ಮುಳಿ‌ಯ

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಫ್ರಿಕಾದ ನಮೀಬಿಯಾದಿಂದ ಎಂಟು ಚಿರತೆಗಳನ್ನು ತರಲಾಗಿದೆ.

ಭಾರತಕ್ಕೆ ಈ ತಳಿಯ ವನ್ಯಪ್ರಾಣಿಗಳನ್ನು ಮರು ಪರಿಚಯಿಸುವ ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮಜನ್ಮದಿನವಾದ ಸೆ.17 ರಂದು ಇವುಗಳನ್ನು ಬಿಡುಗಡೆ ಮಾಡಿದರು.

ಚೀತಾ ತರುವ ತಂಡದಲ್ಲಿನ ಪಶುವೈದ್ಯರು ಹಾಗೂ ವನ್ಯಜೀವಿ ತಜ್ಞರಲ್ಲಿ ಪುತ್ತೂರಿನ ಮುಳಿಯ ಕುಟುಂಬದ ಡಾ.ಸನತ್ ಕುಮಾರ್ ಮುಳಿಯ ಅವರು ಕೂಡಾ ಇದ್ದರು.

 

ಭಾರತದಲ್ಲಿ 1952 ರಲ್ಲಿ ಚೀತಾಗಳು ಅಳಿದುಹೋಗಿದೆ ಎಂದು ಪರಿಗಣಿಸಲಾಗಿತ್ತು. ಇದೀಗ ಮತ್ತೆ ಆಗಮಿಸಿದ ಈ ಚೀತಾ ದೇಶದಾದ್ಯಂತ ಕುತೂಹಲ ಹಾಗೂ ಸಂಭ್ರಮಕ್ಕೆ ಕಾರಣವಾಗಿತ್ತು. ಇದಕ್ಕಾಗಿ ಪ್ರಧಾನಿಗಳ 72 ನೇ ಜನ್ಮದಿನದ ಆಚರಣೆಯ ಸಂದರ್ಭದ ನೆನಪಾಗಿದೆ.ಈ ಚೀತಾಗಳ ಮರು ಪರಿಚಯದ ಮೂಲಕ ಪ್ರವಾಸಿಗರನ್ನು ಮತ್ತು
ಉತ್ತೇಜಿಸಲಿದೆ.

“ಪ್ರಾಜೆಕ್ಟ್ ಚೀತಾ” ಹೆಸರಿನ ಈ ಯೋಜನೆಯಲ್ಲಿ ಎಂಟು ಚೀತಾಗಳಲ್ಲಿ ಐದು ಹೆಣ್ಣು 2 ರಿಂದ 5 ವರ್ಷ ವಯಸ್ಸಿನ ನಡುವೆ, ಮತ್ತು ಮೂರು 4.5 ರಿಂದ 5.5 ವರ್ಷದೊಳಗಿನ ಗಂಡುಗಳಾಗಿವೆ. ಬೋಯಿಂಗ್ 747-400 ವಿಮಾನ ಶನಿವಾರ ಬೆಳಿಗ್ಗೆ 7:55 ರ ಸುಮಾರಿಗೆ ಗ್ವಾಲಿಯರ್ನಲ್ಲಿ ಇಳಿದ ನಂತರ, ಚೀತಾಗಳನ್ನು ವಾಯುಪಡೆಯ ಹೆಲಿಕಾಪ್ಟರ್ ಗಳಲ್ಲಿ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಚೀತಾ ತರುವ ತಂಡದಲ್ಲಿ ಎಂಟು ಜನ ತಜ್ಞರು ತಂಡದಲ್ಲಿದ್ದರು. ಅಧಿಕಾರಿಗಳು ಹಾಗೂ ಪಶುವೈದ್ಯರು, ವನ್ಯಜೀವಿ ತಜ್ಞರು ಇದ್ದರು. ಒಟ್ಟು ಮೂವರು ವನ್ಯಜೀವಿ ತಜ್ಞರು ಹಾಗೂ ಪಶುವೈದ್ಯರು ಇದ್ದರು.
ನಮೀಬಿಯಾದ ಭಾರತೀಯ ಹೈಕಮಿಷನರ್ ಪ್ರಶಾಂತ್‌ ಅಗರ್‌ವಾಲ್ ಈ ಯೋಜನೆಯ ಮುಖ್ಯಸ್ಥರಾಗಿದ್ದರು. ಯದುವೇಂದ್ರ ದೇವ್, ವಿಕ್ರಂ ಮೊದಲಾದ ತಜ್ಞರು ಹಾಗೂ ವನ್ಯಜೀವಿ ತಜ್ಞ ಸಿಂಗ್ ಹಾಗೂ ಪಶುವೈದ್ಯರೂ ಆಗಿರುವ
ಸುಳ್ಯ ಪ್ರಸಿದ್ದ ಚಿನ್ನಾಭರಣಗಳ ಮಳಿಗೆಯ ಗೋವಿಂದ ಭಟ್ ಮುಳಿಯ ಮತ್ತು ಶಿವರಾಮ ಭಟ್ ಮುಳಿಯರವರ ಸಹೋದರ ಪುತ್ತೂರಿನ ದಿ.ಕೇಶವ ಭಟ್ ಹಾಗೂ ಉಷಾ ಭಟ್ ಮುಳಿಯರವರ ಪುತ್ರ ಡಾ.ಸನತ್ ಕುಮಾರ್ ಮುಳಿಯ ಭಾಗವಹಿಸಿದ್ದರು.

ಶುಕ್ರವಾರ ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನ ಉತ್ತರಕ್ಕೆ ರಸ್ತೆಯ ಮೂಲಕ 11 ಗಂಟೆಗಳ ಹಾರಾಟಕ್ಕಾಗಿ “ಕ್ಯಾಟ್ ಪ್ಲೇನ್” ಎಂದು ಕರೆಯಲಾಗುವ ಚಾರ್ಟಡ್ ಬೋಯಿಂಗ್ ವಿಮಾನ ಸಿದ್ಧಪಡಿಸಲಾಗಿತ್ತು.
ನಮೀಬಿಯಾದ ಭಾರತೀಯ ಹೈಕಮಿಷನರ್ ಪ್ರಶಾಂತ್ ಅಗರವಾಲ್ ಪ್ರಕಾರ, ಈ ಯೋಜನೆಯು ವಿಶ್ವದ ಮೊದಲ ಭೂಖಂಡದ ಚಿರತೆಗಳ ಸ್ಥಳಾಂತರವಾಗಿದೆ, ಇದು ವಿಶ್ವದ ಅತ್ಯಂತ ವೇಗದ ಭೂ ಪ್ರಾಣಿಯಾಗಿದೆ.ಈ ಸ್ಥಳಾಂತರಕ್ಕೆ ಭಾರತವು ಹೆಚ್ಚು ಉತ್ಸುಕವಾಗಿದೆ. ಏಕೆಂದರೆ ಇದು ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ನಡೆಯುತ್ತಿದೆ ಎಂದು ನಮೀಬಿಯಾದಲ್ಲಿ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು.

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಿಡಲಾಗಿರುವ ಈ ಚೀತಾಗಳನ್ನು ಉಪಗ್ರಹದ ಮೂಲಕ ಗಮನಿಸಲು ಎಲ್ಲ ಚೀತಾಗಳಿಗೂ ರೇಡಿಯೋ ಕಾಲರ್‌ಗಳನ್ನು ಅಳವಡಿಸಲಾಗಿದೆ. ಈ ಚೀತಾಗಳ ಪ್ರತಿ ನಿಮಿಷದ ಚಲನವಲನಗಳ ಮೇಲೆ ದಿನದ 24 ಗಂಟೆಯೂ ನಿಗಾ ವಹಿಸಲು ಇದಕ್ಕೆಂದೇ ಮೀಸಲಾದ ತಂಡವೊಂದು ಕೆಲಸ ಮಾಡಲಿದೆ.

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ 748 ಚ ಕಿ ಮೀ ಇದೆ. ಮಾನವ ಸಂಚಾರ ವಿರಳವಾಗಿರುವ ಈ ಉದ್ಯಾನವನದಲ್ಲಿ ಚೀತಾಗಳಿಗೆ ಉತ್ತಮವಾದ ವಾತಾವರಣ ಇದ್ದು ಸೂಕ್ತ ವಾತಾವರಣ ಇರುವ ಕಾರಣದಿಂದ ಈ ಪ್ರದೇಶದಲ್ಲಿ ಚೀತಾಗಳನ್ನು ಬಿಡಲಾಗಿದೆ.