ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ.ವಿ.ತೀರ್ಥರಾಮ ಅಧಿಕಾರ ಸ್ವೀಕಾರ

0

 

ಸುಳ್ಯದ ಬಿ. ಜೆ. ಪಿ. ಮುಂದಾಳು, ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಎ. ವಿ. ತೀರ್ಥರಾಮರನ್ನು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರಕಾರವು ನೇಮಕ ಮಾಡಿದ್ದು, ಇಂದು ಮಂಗಳೂರಿನ ನಿಗಮದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ.ಮುಖಂಡರುಗಳಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಸುಭೋದ್ ಶೆಟ್ಟಿ ಮೇನಾಲ,ರಾಕೇಶ್ ರೈ ಕೆಡೆಂಜಿ, ಮುಳಿಯ ಕೇಶವ ಭಟ್,ಕೃಷ್ಣ ಶೆಟ್ಟಿ ಕಡಬ, ಸುನಿಲ್ ಕುಮಾರ್ ಕೇರ್ಪಳ,ಶ್ರೀಕಾಂತ್ ಮಾವಿನಕಟ್ಟೆ, ನವೀನ್ ಬಾಳುಗೋಡು,ಶ್ರೀಕೃಷ್ಣ ಎಂ. ಆರ್, ಮಹಾವೀರ ಜೈನ್, ರಾಧಾಕೃಷ್ಣ ಕೆ. ಆರ್,ಮೊದಲಾದವರು ಉಪಸ್ಥಿತರಿದ್ದರು ಎ.ವಿ‌.ತೀರ್ಥರಾಮರು ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷರಾಗಿ, ಸುಳ್ಯ ಮಂಡಲದ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಪಕ್ಷದಲ್ಲಿ ನಿರಂತರ ಸೇವೆ ಸಲ್ಲಿಸಿದ್ದಾರೆ.
ಗುತ್ತಿಗಾರು ಮಂಡಲ ಪಂಚಾಯತ್ ಸದಸ್ಯರಾಗಿ, ಗುತ್ತಿಗಾರು ಪ್ರಾ. ಕೃ. ಪ. ಸಹಕಾರಿ ಸಂಘದ ಅಧ್ಯಕ್ಷರಾಗಿ, ನಿರ್ದೇಶಕರಾಗಿ, ವೆಂಕಟರಮಣ ಕ್ರೆ. ಕೋ. ಸೊಸೈಟಿಯ ಅಧ್ಯಕ್ಷರಾಗಿ, ನಿರ್ದೇಶಕರಾಗಿ, ಸುಳ್ಯ ಗೌಡರ ಯುವ ಸೇವಾ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ, ಗೌಡ ಸಮುದಾಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ದೇವಚಳ್ಳ ಗ್ರಾಮದ ದರ್ಬಡ್ಕ ನಿವಾಸಿ ದಿ| ಅಂಬೆಕಲ್ಲು ವೆಂಕಪ್ಪ ಗೌಡ ದಿ| ದೇವಕಿ ದಂಪತಿಯ ಪುತ್ರರಾಗಿರುವ ಎ.ವಿ. ತೀರ್ಥರಾಮರು ಬಿ.ಎಸ್.ಸಿ. ಪದವೀಧರ.