ಪಯಸ್ವಿನಿ ಸ್ತ್ರೀಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

 

ಸುಳ್ಯ ತಾಲೂಕು ಪಯಸ್ವಿನಿ ಸ್ತ್ರೀ ಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ಶ್ರೀಮತಿ ಉಷಾಜಯರಾಮರವರ ಅಧ್ಯಕ್ಷತೆಯಲ್ಲಿ ಸೆ.19 ರಂದು ಸುಳ್ಯದ ಸ್ತ್ರೀ ಶಕ್ತಿ ಸಭಾ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷೆ ಶ್ರೀಮತಿ ಉಷಾಜಯರಾಮರವರು ಸ್ವಾಗತಿಸಿ,
ಸಹಕಾರ ಸಂಘದ ಆರ್ಥಿಕ ವ್ಯವಹಾರಗಳ ಬಗ್ಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತ ಎಸ್.ವಾರ್ಷಿಕ ವರದಿ ಮಂಡಿಸಿದರು.
ಸಂಘದ ಪದನಿಮಿತ್ತ ನಿರ್ದೇಶಕಿ ಸಿಡಿಪಿಒ ಶ್ರೀಮತಿ‌ ರಶ್ಮಿಯವರು ಸಂಘದ ಬೆಳವಣಿಗೆ ಬಗ್ಗೆ ಮಾತನಾಡಿ ಸಂಘದ ಸದಸ್ಯರು ನಮ್ಮ ಸಂಘದಿಂದಲೇ ಸಾಲ ಮಾಡಿ ಸಂಘವನ್ನು ಅಭಿವೃದ್ಧಿಯತ್ತ ಕೊಂಡೋಗಬೇಕು.
ಇಲ್ಲಿ ಇತರ ಬ್ಯಾಂಕಿನಂತೆ ಎಲ್ಲಾ ವ್ಯವಸ್ಥೆಗಳು ಇದೆ.
ಗ್ರೂಪ್ ಸಾಲ ಕೂಡ ನೀಡಲಾಗುವುದು .


ಸಾಲ ಮಾಡಿದವರು ಅವಧಿಗೆ ಸರಿಯಾಗಿ ಮರುಪಾವತಿ ಮಾಡಿ ಸಹಕರಿಸಬೇಕು ಎಂದು ಹೇಳಿದರು.
ಕಾನೂನು ಸಲಹೆಗಾರರಾದ ನ್ಯಾಯವಾದಿ ದಿನೇಶ್ ಅಂಬೆಕಲ್ಲು ಸಂಘದ ವ್ಯವಹಾರದ ಬಗ್ಗೆ ಕಾನೂನು ಸಲಹೆ ನೀಡಿದರು.
ಸಂಘದ ಆರ್ಥಿಕ ಸಲಹೆಗಾರರಾದ ಪಿ.ಸಿ.ಜಯರಾಮರವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಲತಾ‌ ಕುಮಾರಿ, ನಿರ್ದೇಶಕರಾದ ಶ್ರೀಮತಿ ನಿರ್ಮಲ ಎಂ, ಶ್ರೀಮತಿ ನಳಿನಿ ಜಿ, ಶ್ರೀಮತಿ ಸರಸ್ವತಿ ಸಿ.ಕೆ, ಶ್ರೀಮತಿ ಪ್ರೇಮಾ ಕನಕಮಜಲು, ಶ್ರೀಮತಿ ಪಾರ್ವತಿ ಐವರ್ನಾಡು, ಶ್ರೀಮತಿ ಸಂಧ್ಯಾ ಟಿ.ಕೆ, ವನಜಾ ಎಸ್.ರೈ,  ಸುಲೋಚನಾ ದೇವ, ಶ್ರೀಮತಿ ರೇವತಿ ಪಿ., ಶ್ರೀಮತಿ ಹರ್ಷಿಣಿ ಕುಮಾರಿ, ಶ್ರೀಮತಿ ಪವಿತ ಡಿ.ಸಿ, ಉಪಸ್ಥಿತರಿದ್ದರು.
ಸಂಘದ ಆರ್ಥಿಕ ವ್ಯವಹಾರಗಳ ಬಗ್ಗೆ ಚರ್ಚೆಗಳು ನಡೆಯಿತು.
ಉಪಾಧ್ಯಕ್ಷೆ ಶ್ರೀಮತಿ ಲತಾ ಕುಮಾರಿ ವಂದಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here