ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ವಾರ್ಷಿಕ ಮಹಾಸಭೆ

0
284

 

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 18 ರಂದು ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸಂಜಯ್ ನೆಟ್ಟಾರು ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘದ ಕಾರ್ಯದರ್ಶಿ ವಸಂತ ಉಲ್ಲಾಸ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಸುಪ್ರಿತ್ ಬಸ್ತಿಗುಡ್ಡೆ ವಾರ್ಷಿಕ ಜಮಾ ಖರ್ಚು ಲೆಕ್ಕಪತ್ರ ಮಂಡಿಸಿದರು.
ನಡೆದ ಕಾರ್ಯಕ್ರಮಗಳ ಅವಲೋಕನ ನಡೆಯಿತು. ಸಂಘಕ್ಕೆ ಸಿದ್ಧಪಡಿಸಲಾದ ನೂತನ ಕಾರ್ಯಕ್ರಮಗಳನ್ನು ಅಂಗೀಕರಿಸಲಾಯಿತು. ಸಭೆಯಲ್ಲಿ ಸೇರಿದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ನಂತರ 2022-23ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅಧ್ಯಕ್ಷರಾಗಿ ವಸಂತ ಉಲ್ಲಾಸ್‌, ನಿಕಟಪೂರ್ವಾಧ್ಯಕ್ಷರಾಗಿ ಸಂಜಯ್‌ ನೆಟ್ಟಾರು, ಉಪಾಧ್ಯಕ್ಷರಾಗಿ ವಸಂತ ಗೌಡ ಪಡ್ಡು ಕಾರ್ಯದರ್ಶಿಯಾಗಿ ಆನಂದ ಮಣಿಯಣಿ ಉಮಿಕ್ಕಳ, ಕೋಶಾಧಿಕಾರಿಯಾಗಿ ಮಹಾಲಿಂಗ ಪಾಟಾಳ ಕುರುಂಬುಡೇಲು, ಜತೆ ಕಾರ್ಯದರ್ಶಿಯಾಗಿ ಶ್ರೀನಿವಾಸ ಕುರುಂಬುಡೇಲು, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚೇತನ್ ಪಡ್ಡು ಹಾಗೂ ಮನೋಹರ ದಾಸನಮಜಲು, ಸುಪ್ರಿತ್ ಬಸ್ತಿಗುಡ್ಡೆ,

ಸದಾಶಿವ `ಬಸ್ತಿಗುಡ್ಡೆ, ಶಿವರಾಮ ನಾಯಕ್ ಪನ್ನೆ ಬಾಲಕೃಷ್ಣ ಪೂಜಾರಿ ಚೀಮುಳ್ಳು, ಪದ್ಮನಾಭ ಚೂಂತಾರು, ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಸದಸ್ಯರ ಸೂಚನೆ ಹಾಗು ಅನುಮೋದನೆಯೋಂದಿಗೆ ಆರಿಸಲಾಯಿತು. ನಿಕಟಪೂರ್ವಾಧ್ಯಕ್ಷ ಕೊರಗಪ್ಪ ನಾಯ್ಕ ಕುರುಂಬುಡೇಲು ಉಪಾಧ್ಯಕ್ಷರಾದ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ ಜತೆ ಕಾರ್ಯದರ್ಶಿ ಆನಂದ ಮಣಿಯಾಣಿ ಉಮಿಕ್ಕಳ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಚೀಮುಳ್ಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತ ಉಲ್ಲಾಸ್ ಸ್ವಾಗತಿಸಿ, ಆನಂದ ಮಣಿಯಾಣಿ ಉಮಿಕ್ಕಳ ವಂದಿಸಿದರು. ಶ್ರೀನಿವಾಸ ಕುರುಂಬುಡೇಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here