ಅರಂತೋಡು : ದುರ್ಗಾ ಮಾತಾ ಮಹಿಳಾ ಮಂಡಲದ ವತಿಯಿಂದ ಸಂಗೀತ ತರಬೇತಿ ಉದ್ಘಾಟನೆ

0

ಅರಂತೋಡು ದುರ್ಗಾ ಮಾತಾ ಮಹಿಳಾ ಮಂಡಲದ ವತಿಯಿಂದ ಸಂಗೀತ ತರಬೇತಿ ಉದ್ಘಾಟನೆಯು ಸೆ.೧೬ ರಂದು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅರಂತೋಡು ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ನೆರವೇರಿಸಿದರು. ದುರ್ಗಾಮಾತಾ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ ಅಧ್ಯಕ್ಷತೆ ವಹಿಸಿದ್ದರು.


ಸುಳ್ಯ ಸಾಹಿತ್ಯ ಸಂಗೀತ ಕಲಾ ಕೇಂದ್ರದ ನಿರ್ದೇಶಕಿ, ಸಂಗೀತ ಶಿಕ್ಷಕಿ ಶ್ರೀಮತಿ ಆರತಿ ಪುರುಷೋತ್ತಮ, ಅರಂತೋಡು ಗ್ರಾ ಪಂ ಅಧ್ಯಕ್ಷೆ ಕು. ಶ್ವೇತಾ ಅರಮನೆಗಾಯ, ದುರ್ಗಾಮಾತಾ ಮಹಿಳಾ ಮಂಡಳದ ಗೌರವ ಅಧ್ಯಕ್ಷೆ ಶ್ರೀಮತಿ ಯಶೋದಾ ಹೂವಯ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದುರ್ಗಾ ಮಾತಾ ಭಜನಾ ಮಂಡಳಿಯ ಅಧ್ಯಕ್ಷ ಕೆ.ಆರ್ ಪದ್ಮನಾಭ, ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಗೋಪಾಲ ಕಾಟೂರ್ ಹಾಗೂ ದುರ್ಗಾ ಮಾತಾ ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಊರವರು ಉಪಸ್ಥಿತರಿದ್ದರು
ರೀನಾ ಚಂದ್ರಶೇಖರ ಪ್ರಾರ್ಥಿಸಿ, ಭಾರತಿ ಪುರುಷೋತಮ್ ಸ್ವಾಗತಿಸಿ, ಗೀತಾ ಶೇಖರ್ ವಂದಿಸಿದರು. ಭವಿತ ಕುಸುಮಾಧರ ಕಾರ್ಯಕ್ರಮ ನಿರೂಪಿಸಿ ದರು. .