ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

224.9 ಕೋಟಿ ವ್ಯವಹಾರ 48.46 ಲಕ್ಷ ಲಾಭ, ಶೇ .8 ಡಿವಿಡೆಂಟ್

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲುರವರ ಅಧ್ಯಕ್ಷತೆಯಲ್ಲಿ ಸೆ.20 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ರೈ ವಾರ್ಷಿಕ ವರದಿ ಮಂಡಿಸಿದರು.


ಸಂಘದ ಅಧ್ಯಕ್ಷ ಅನಿಲ್ ರೈಯವರು ಸ್ವಾಗತಿಸಿ,ಸಂಘವು 224.9 ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ.48.46 ಲಕ್ಷ ಲಾಭಗಳಿಸಿದೆ.
ಸದಸ್ಯರಿಗೆ ಶೇ.8 ಡಿವಿಡೆಂಟ್ ನೀಡಲಾಗುವುದು ಎಂದು ಹೇಳಿ ಸಂಘದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.


ದಯಾಕರ ಆಳ್ವ, ಐತ್ತಪ್ಪ ರೈ ಅಜ್ರಂಗಳ, ಸಚಿನ್ ರಾಜ್ ಶೆಟ್ಟಿ, ಶಿವರಾಮ ನಾಯಕ್, ಹರ್ಷನ್ ಕೆ.ಟಿ, ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಸುಬ್ರಹ್ಮಣ್ಯ ಭಟ್,ಈಶ್ವರ ಆಳ್ವ, ಜೈನುದ್ದೀನ್,ರಾಜೀವಿ ಆರ್ .ರೈ, ಆರ್.ಕೆ.ಭಟ್ ಕುರುಂಬುಡೇಲು , ಮತ್ತಿತರರು ವರದಿ ಬಗ್ಗೆ ಹಾಗೂ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಿದರು. ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ನಿರ್ದೇಶಕರಾದ ಕರುಣಾಕರ ಆಳ್ವ, ರಮೇಶ ಮಾರ್ಲ, ಶ್ರೀರಾಮ ಪಾಟಾಜೆ, ವಿಠಲದಾಸ್ ಎನ್.ಎಸ್.ಡಿ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ಶ್ರೀಮತಿ ಸುನಂದ ಆಳ್ವರವರು ವಂದಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.