ಫಾಝಿಲ್ ಮತ್ತು ಮಸೂದ್ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಸರಕಾರದ ತಾರತಮ್ಯ ಧೋರಣೆ

0

ಕಾಂಞಂಗಾಡ್ – ಕಾಣಿಯೂರು ರೈಲ್ವೆ ಮಾರ್ಗ ಅನುಪ್ಠಾನದಲ್ಲಿ ಸರಕಾರ ಎಡವಿದೆ

ಭಾರತ ಜೋಡೋ ನಡಿಗೆ ವಿಫಲಗೊಳಿಸಲು ಐಟಿ,ಇಡಿ ದಾಳಿಯ ಹುನ್ನಾರ

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್

ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಕಳಂಜದ ಮಸೂದ್ ಮತ್ತು ಸುರತ್ಕಲ್ ನ ಫಾಝಿಲ್ ಕುಟುಂಬಕ್ಕೆ ಸರಕಾರ ಪರಿಹಾರ ನೀಡದೆ ತಾರತಮ್ಯ ಧೋರಣೆ ಅನುಸರಿಸಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಭಾರತ್ ಜೋಡೋ ಭಾರತ ಐಕ್ಯತಾ ಯಾತ್ರೆಯ ಸಂಯೋಜಕರಾದ ಟಿ.ಎಂ.ಶಹೀದ್ ಹೇಳಿದರು.
ಅವರು ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಹತ್ಯೆಯಾದ ಎರಡೂ ಜೀವಕ್ಕೂ ಬೆಲೆಯಿಲ್ಲದಂತಾಗಿದೆ‌.ಮುಖ್ಯ ಮಂತ್ರಿ,ಗೃಹಸಚಿವರು,ಜಿಲ್ಲಾಡಳಿತ ಯಾವುದೇ ಪರಿಹಾರ ನೀಡದಿರುವುದು ನೋವಿನ ಸಂಗತಿ.ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಪ್ರಧಾನಿ,ಮುಖ್ಯ ಮಂತ್ರಿಗಳು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಬಹಿರಂಗವಾಗಿಯೇ ಮಾಡುತ್ತಿದ್ದಾರೆ. ಆ ಎರಡೂ ಕುಟುಂಬಗಳಿಗೆ ಪಕ್ಷದ ವತಿಯಿಂದ ಕೊಡಬೇಕಾಗಿಲ್ಲ,ಸರಕಾರದ ವತಿಯಿಂದ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಅಲ್ಪ ಸಂಖ್ಯಾತರಿಗೆ ಸಂಕಷ್ಟ ಕೊಡುವ ಕೆಲಸವನ್ನು ಸರಕಾರ ಮಾಡುತ್ತಿದೆ.ಮುಸಲ್ಮಾನರನ್ನು ನಾಲ್ಕನೇ ದರ್ಜೆಯ ಪ್ರಜೆಯನ್ನಾಗಿ ನೋಡುವ ವ್ಯವಸ್ಥೆ ಬೇಸರಸ ಸಂಗತಿ.ಕೋಮು ಪ್ರಚೋದನೆ ಮಾಡುವ ಸನ್ನಿವೇಶಗಳು ನಿರ್ಮಾಣವಾಗುತ್ತಿದ್ದು,ಅಂತಹ ಕೆಲಸ ಮಾಡುವ ಯಾವುದೇ ಧರ್ಮದವರನ್ನು ನಿರ್ಮೂಲನೆ ಮಾಡುವ ಕೆಲಸವನ್ನು ಸರಕಾರ ಮಾಡಬೇಕು. ವೀರ ಸಾರ್ವರ್ಕರ್ ರನ್ನು ಮುನ್ನಲೆಗೆ ತಂದು ಟಿಪ್ಪು ಸುಲ್ತಾನ್ ರನ್ನು ಹಿನ್ನೆಲೆಗೆ ತರುವ ಕೆಲಸವನ್ನು ಸರಕಾರ ಮಾಡುತಿದೆ.ಗಾಂಧೀಜಿಯನ್ನು ಕೊಂದ ಗೋಡ್ಸೆ ಗೆ ದೇವಸ್ಥಾನ ಕಟ್ಟುವ ,ಪೂಜೆ ಮಾಡುವ ಕೆಲಸವಾಗುತಿದೆ.ಇದು ಆಗಬಾರದು. ಎಂದು ಹೇಳಿದರು
ಜೋಡೋ ಯಾತ್ರೆಗೆ 10 ಸಾವಿರ ಮಂದಿ
ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದ್ದು, ನಡಿಗೆಯು ರಾಜ್ಯ ಪ್ರವೇಶಿಸುವ ಸಂದರ್ಭದಲ್ಲಿ ದ.ಕ.ಜಿಲ್ಲೆಯಿಂದ ಸುಮಾರು 10ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಯಶಸ್ವಿಯಾಗಿ ನಡೆಯುತ್ತಿರುವ ಯಾತ್ರೆಯನ್ನು ವಿಫಲಗೊಳಿಸುವ ಹುನ್ನಾರವನ್ನು ಮಾಡಲಾಗುತಿದೆ. ಕೆ.ಪಿ‌.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಇಡಿ ದಾಳಿ ನಡೆಸಲಾಗುತಿದೆ. ಐಟಿ,ಇಡಿ ದಾಳಿ ಕೇವಲ ಕಾಂಗ್ರೆಸ್, ಜನತಾದಳ, ಆಪ್ ಪಕ್ಷದವರ ಮೇಲೆ ಮಾತ್ರ ನಡೆಯುತ್ತಿದ್ದು,ಬಿಜೆಪಿಯ ಯಾವೊಬ್ಬ ನಾಯಕನ ಮೇಲೆಯೂ ದಾಳಿಯಾದ ನಿದರ್ಶನವಿಲ್ಲ.ಎಂದರು.

ರೈಲ್ವೆ ಮಾರ್ಗ ಅನುಷ್ಠಾನ ಸರಕಾರದ ಎಡವಟ್ಟು
ಬಹು ನಿರೀಕ್ಷಿತ ಕಾಂಞಂಗಾಡ್- ಕಾಣಿಯೂರು ರೈಲ್ವೆ ಮಾರ್ಗ ಅನುಷ್ಠಾನದಲ್ಲಿ ಸರಕಾರ ಎಡವಿದೆ. ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವರು ಈ ಮಾರ್ಗದ ಬಗ್ಗೆ ಆಸಕ್ತಿ ತೋರಿಸಿದ್ದರು. ಮುಖ್ಯಮಂತ್ರಿಗಳು ಪರಿಸರದ ಕಾರಣ ನೀಡಿ ಹಿಂದೆ ಸರಿಯುವುದು ಸರಿಯಲ್ಲ. ನಮ್ಮ ಸರಕಾರ ಬಂದಲ್ಲಿ ಮತ್ತೆ ಪ್ರಯತ್ನ ಮುಂದುವರೆಸುತ್ತೇವೆ ಎಂದರು.
ಸಂಪಾಜೆ ಭಾಗದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಂಡ ಮನೆಗಳಿಗೆ ಸರಕಾರ ಪರಿಹಾರ ನೀಡದೆ ನಿರ್ಲಕ್ಷ್ಯ ಮಾಡಿದೆ. ಎಂದರು.
ಎ.ಐ.ಸಿ.ಸಿ‌.ಸದಸ್ಯತ್ವಕ್ಕಾಗಿ ಸುಳ್ಯ ಬ್ಲಾಕ್ ನಿಂದ ನನ್ನ ಹೆಸರು ಮತ್ತು ವೆಂಕಪ್ಪ ಗೌಡರ ಹೆಸರು ಶಿಫಾರಸ್ಸು ಮಾಡಲಾಗಿದ್ದು ಬ್ಲಾಕ್ ಅಧ್ಯಕ್ಷರಿಗೆ ಧನ್ಯವಾದ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಆರ್.ಕೆ‌.ಮಹಮ್ಮದ್, ಆರ್.ಬಿ.ಬಶೀರ್ ಉಪಸ್ಥಿತರಿದ್ದರು.