ಸೋಣಂಗೇರಿ : ಮಹಿಳೆಯ‌ ಕಾಲಿನ ಮೇಲೆ ಬಸ್ ಹಿಂಬದಿ ಟಯರ್ ಹರಿದು ಗಂಭೀರ

0

ಚಾಲಕನ ನಿರ್ಲಕ್ಷ್ಯತನವೇ ಘಟನೆಗೆ ಕಾರಣ : ಮನೆಯವರ ದೂರು

ಸೋಣಂಗೇರಿ ಬಳಿ ಬಸ್ಸಿನಿಂದ ಬಿದ್ದು ಮಹಿಳೆ ಗಾಯಗೊಂಡ ಘಟನೆಗೆ ಸಂಬಂಧಿಸಿ ಬಸ್ ಚಾಲಕನ ಅಜಾಗರೂಕತೆ ಘಟನೆಗೆ ಕಾರಣವೆಂದು ಆರೋಪಿಸಿ ಮಹಿಳೆಯ ಸಂಬಂಧಿ ಹಸೈನಾರ್ ಕೊಳೆಂಜಿಕೋಡಿ ಎಂಬವರು ಸುಳ್ಯ ಪೊಲೀಸ್ ಠಾಣೆಗೆ ಸೆ.20ರಂದು‌ ಸಂಜೆ ದೂರು ನೀಡಿದ್ದಾರೆ.


ಈ ಬಗ್ಗೆ ಮಹಿಳೆಯ ಸಂಬಂಧಿ ದುಗಲಡ್ಕ ಗ್ರಾಮದ ಕೊಳಂಜಿ ಕೋಡಿ ಮನೆಯ ಕೆಎಂ ಹಸೈನಾರ್ ಎಂಬುವವರು ಸುಳ್ಯ ಠಾಣೆಗೆ ದೂರು ನೀಡಿ ಈ ಘಟನೆಗೆ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿರ್ಲಕ್ಷತನದ ಕಾರಣದಿಂದ ಉಂಟಾಗಿದ್ದು ತಮಗೆ ನ್ಯಾಯ ಕೊಡಿಸುವಂತೆ ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ.
ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವ ಹಸೈನಾರ್ ರವರು ನಾನು ಇಂದು ಪೂರ್ವಾಹ್ನ ಸಮಯ ಸುಮಾರು 11:55 ಕ್ಕೆ ಕೆಲಸದ ನಿಮಿತ್ತ ಸೋಣಗೇರಿಯಲ್ಲಿ ನಿಂತಿದ್ದ ಸಂದರ್ಭ ಬೆಳ್ಳಾರೆ ಕಡೆಯಿಂದ ಬಂದ ಕೆ ಎಸ್ ಆರ್ ಟಿ ಸಿ ಬಸ್ಸು ಸೋಣಂಗೇರಿ ಜಂಕ್ಷನ್ ಬಳಿ ಬಂದು ನಿಂತಿತ್ತು. ಅದರಿಂದ ಓರ್ವ ಮಹಿಳೆ ಇಳಿಯುತ್ತಿದ್ದ ಸಂದರ್ಭ ಬಸ್ಸಿನ ಚಾಲಕ ನಿರ್ಲಕ್ಷತನದಿಂದ ಯಾವುದೇ ಸೂಚನೆಯನ್ನು ನೀಡದೆ ಏಕಾಏಕಿ ಬಸ್ಸನ್ನು ಚಲಾಯಿಸಿದರ ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಾಗ ಬಸ್ಸಿನ ಎಡಬಾಗದ ಹಿಂಬದಿ ಚಕ್ರ ಅವರ ಬಲಕಾಲಿನ ಮೇಲೆ ಹತ್ತಿರುತ್ತದೆ. ಕೂಡಲೇ ನಾನು ಮತ್ತು ಸ್ಥಳದಲ್ಲಿದ್ದ ಇತರರು ಓಡಿ ಹೋಗಿ ನೋಡಿದಾಗ ಬಿದ್ದಿರುವ ಮಹಿಳೆ ನನ್ನ ಅಣ್ಣನ ಪತ್ನಿ ಮೈಮುನಾ ಹಾಗಿದ್ದು ಕೂಡಲೇ ನಾನು ಮತ್ತು ಅಲ್ಲಿದ್ದ ಇತರರು ಸೇರಿ ಅವರನ್ನು ಜಿಪಿ ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿಗೆ ಕಳುಹಿಸಿಕೊಟ್ಟೆವು.
ಆದ್ದರಿಂದ ಈ ಅಪಘಾತಕ್ಕೆ ಕೆಎ 19 ಎಫ್ 3022 ನೊಂದಣಿ ನಂಬರ್ ನ ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷ ಕಾರಣವಾಗಿದ್ದು ಚಾಲಕನ ಮೇಲೆ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರನ್ನು ಸ್ವೀಕರಿಸಿರುವ ಪೊಲೀಸರು ಅ. ಕ್ರ 104/2022 ಕಲಂ 279,337 ಐ ಪಿ ಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here