ಅಜ್ಜಾವರ  : ಪೋಷಣ್ ಮಾಸಾಚರಣೆ

0

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಗ್ರಾಮ ಪಂಚಾಯತ್ ಅಜ್ಜಾವರ,
ಆರೋಗ್ಯ ಉಪಕೇಂದ್ರ ಅಜ್ಜಾವರ, ರೋಟರಿ ಕ್ಲಬ್ ಸುಳ್ಯ, ಶ್ರೀನಿಧಿ ಶಕ್ತಿ ಗೊಂಚಲು ಅಜ್ಜಾವರ, ಧನಲಕ್ಷ್ಮೀ ಮಹಿಳಾ ಮಂಡಲ( ರಿ )ಅಜ್ಜಾವರ, ವರಮಹಾಲಕ್ಷ್ಮಿ ಪೂಜಾ ಸಮಿತಿ ಮೇನಾಲ ಇವರ ಸಹಯೋಗದಲ್ಲಿ “ಪೋಷಣ್ ಮಾಸಾಚರಣೆ” ಮತ್ತು ಹೆಣ್ಣು ಮಗು ಉಳಿಸಿ, ಹೆಣ್ಣು ಮಗು ಓದಿಸಿ ಯೋಜನೆಯಡಿಯಲ್ಲಿ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ,ಪೌಷ್ಟಿಕ ಕಿಟ್ ವಿತರಣೆ ಕಾರ್ಯಕ್ರಮ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಮೇನಾಲ ದಲ್ಲಿ ನಡೆಯಿತು.

ಕಾರ್ಯಕ್ರಮ ಸಭಾಧ್ಯಕ್ಷತೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟನೆ ಮಾಡಿ ಸಿರಿ ದಾನ್ಯಗಳ ಮಹತ್ವ ವನ್ನು ಕೆವಿಜಿ ಆಯುರ್ವೇದ ಮಹಾವಿದ್ಯಾಲಯ ದ ಸಹ ಪ್ರಧ್ಯಾಪಕ ಡಾ.ಪಿ.ಎ ಪ್ರಮೋದ್ ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಅವರು ಆರೋಗ್ಯ ಬಗ್ಗೆ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆ ಯವರು ಪೋಷಣಾ ಅಭಿಯಾನ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲೀಲಾ ಮನಮೋಹನ, ಗ್ರಾ.ಪಂ. ಸದಸ್ಯರು ಪ್ರಸಾದ್ ರೈ ಮೇನಾಲ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಮಾಲಿನಿ, ಧನಲಕ್ಷ್ಮೀ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಸ್ತ್ರೀಶಕ್ತಿ ಗೊಂಚಲು ಅಧ್ಯಕ್ಷೆ ಶ್ರೀಮತಿ ಗಿರಿಜಾ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಹುಲ್ ಅಡ್ಪಂಗಾಯ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಮಮತಾ ರೈ, ಮೇನಾಲ ಶಾಲೆ ಎ ಸ್.ಡಿ. ಮ್ ಸಿ ಅಧ್ಯಕ್ಷರು ಸೌಕತ್ ಆಲಿ, ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ ಅಜ್ಜಾವರ, ಸುಳ್ಯ ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಮತಿ ಮಧುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರ್ಥನೆ ಯನ್ನು ಶ್ರೀಮತಿ ಪುಷ್ಪಾವತಿ ದೊಡ್ಡೇರಿ ನೆರವೇರಿಸಿದರು. ಸುಳ್ಯವಲಯ ಹಿರಿಯ ಮೇಲ್ವಿಚಾರಕಿ ಶೈಲಜಾ ಸ್ವಾಗತಿಸಿದರು. ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶಶ್ಮಿ ಭಟ್ ಧನ್ಯವಾದ ಮಾಡಿದರು.