ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

 

191.14 ಕೋಟಿ ವ್ಯವಹಾರ, 49.51 ಲಕ್ಷ ಲಾಭ ,ಶೇ.7 ಡಿವಿಡೆಂಟ್

ಐವರ್ನಾಡು ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರ ಅಧ್ಯಕ್ಷತೆಯಲ್ಲಿ ಸೆ.21 ರಂದು ಸಂಘದ ಸಭಾಭವನದಲ್ಲಿ ನಡೆಯಿತು.

 

ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಸ್ವಾಗತಿಸಿ, ವರದಿ ವರ್ಷದಲ್ಲಿ ರೂ.191 .14 ಕೋಟಿ ವ್ಯವಹಾರ ನಡೆಸಿ ರೂ.49.51 ಲಕ್ಷ ಲಾಭ ಗಳಿಸಿದೆ.ಸದಸ್ಯರಿಗೆ ಶೇ.7 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ಸಂಘದ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ವರದಿ ಮಂಡಿಸಿದರು.


ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು.
ಆಕಸ್ಮಿಕವಾಗಿ ನಿಧನರಾದ ದಯಾನಂದ ನಾಟಿಕೇರಿಯವರ ಮನೆಯವರಿಗೆ ನವೋದಯ ಗ್ರಾಮ ವಿಕಾಸ ಟ್ರಸ್ಟಿನ ರೂ.25,000 ಸಹಾಯ ಧನ ನೀಡಲಾಯಿತು.


ಮಾರಾಟ ವಿಭಾಗ ಮತ್ತು ಪಡಿತರ ವಿಭಾಗದಲ್ಲಿ ಉತ್ತಮ ಗ್ರಾಹಕರನ್ನು ಗುರುತಿಸಲಾಯಿತು.
ಶತಾಬ್ದಿ ಸಾಂತ್ವಾನ ನಿಧಿ ವಿತರಣೆ ನಡೆಯಿತು.
ಉತ್ತಮ ಸ್ವಸಹಾಯ ಗುಂಪುಗಳನ್ನು ಗುರುತಿಸಲಾಯಿತು.

 

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ, ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ನಿರ್ದೇಶಕರಾದ ಎಂ.ಸಿ.ಕುಸುಮಾಧರ, ಮಹೇಶ ಜೆ, ಸತೀಶ ಎ.ಕೆ, ಶ್ರೀಮತಿ ದೇವಕಿ ಸಿ.ಜಿ, ಶ್ರೀಮತಿ ಭವಾನಿ ಎಂ.ಸಿ, ಶ್ರೀಮತಿ ಸರಸ್ವತಿ ಕೆ, ಕೃಷ್ಣ ಬೆಳ್ಚಪ್ಪಾಡ, ಪುರಂದರ ಎಸ್, ಚಂದ್ರಶೇಖರ ಎಸ್,ವಾಸುದೇವ ಬಿ.ಕೆ ಉಪಸ್ಥಿತರಿದ್ದರು.