ಕಾಂಚೋಡು: ಸ್ಮೋಕ್ ಹೌಸ್ ಗೆ ಬೆಂಕಿ ಅಪಾರ ನಷ್ಟ

0


ಬಾಳಿಲ ಗ್ರಾಮದ ಕಾಂಚೋಡು ನಾರಾಯಣ ರಾವ್ ರವರ ಸ್ಮೋಕ್ ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿಕೊಂಡು ಅಪಾರ ನಷ್ಟ ಸಂಭವಿಸಿದ ಘಟನೆ ಸೆ. 21ರಂದು ನಡೆದಿದೆ.
ಸುಮಾರು 4,500 ಕ್ಕಿಂತಲೂ ಅಧಿಕ ಒಣಗಿದ ತೆಂಗಿನಕಾಯಿ, ರಬ್ಬರ್ ಬೆಂಕಿಗಾಹುತಿಯಾಗಿದೆ. ವಿಷಯ ತಿಳಿದಂತೆ ಸ್ಥಳೀಯರು ಆಗಮಿಸಿ ಪೈಪಿನಲ್ಲಿ ನೀರು ಹಾಯಿಸಿ ಬೆಂಕಿ ಮನೆಯ ಭಾಗಕ್ಕೆ ಹರಡುವುದನ್ನು ತಡೆದಿದ್ದಾರೆ. ನಂತರ ಸುಳ್ಯ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರೆಂದು ತಿಳಿದುಬಂದಿದೆ.