ಆರು ಮಂದಿ ಶಿಕ್ಷಕರಿಗೆ ‘ಮಲೆನಾಡು ಸಿರಿ’ ಶಿಕ್ಷಕ ಪ್ರಶಸ್ತಿ ಪ್ರದಾನ

0

 

 

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ‘ಮಲೆನಾಡು ಸಿರಿ’ ಶಿಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭ ಸೆ.21 ರಂದು ಸುಳ್ಯದ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು.

 

ಪ್ರಶಸ್ತಿಗೆ ಆಯ್ಕೆಯಾಗಿರುವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕ ಚಂದ್ರಶೇಖರ ಕೆ.ಎಸ್., ಸಂಪಾಜೆ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ, ಸುಳ್ಯ ರೋಟರಿ ವಿದ್ಯಾಸಂಸ್ಥೆ ಶಿಕ್ಷಕಿ ಉಷಾ, ಕೋಲ್ಚಾರ್ ಪ್ರಾಥಮಿಕ ಶಾಲಾ ಶಿಕ್ಷಕಿ ಜಲಜಾಕ್ಷಿ ಡಿ, ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ದೈ.ಶಿ.ಶಿಕ್ಷಕ ಕೊರಗಪ್ಪ, ಕೊಲ್ಲಮೊಗ್ರ ಅಂಗನವಾಡಿ ಕಾರ್ಯಕರ್ತೆ ನಳಿನಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ತಹಶೀಲ್ದಾರ್ ಅನಿತಾಲಕ್ಷ್ಮೀ ಉದ್ಘಾಟಿಸಿದರು.

 

ತಾ.ಪಂ. ಇ.ಒ. ಭವಾನಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ನ.ಪಂ. ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್,  ಶರೀಫ್ ಕಂಠಿ,ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್, ಸಿಡಿಪಿಒ ಶ್ರೀಮತಿ ರಶ್ಮಿ ನೆಕ್ರಾಜೆ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್, ಸುಳ್ಯ ಸುದ್ದಿ ಬಿಡುಗಡೆ ಸಂಸ್ಥೆ ಕಚೇರಿ ಮ್ಯಾನೇಜರ್ ಯಶ್ವಿತ್ ಕಾಳಮ್ಮನೆ, ಜನತಾ ಗ್ರೂಪ್ ನ ಹಮೀದ್ ಜನತಾ, ಕೆ.ಎಫ್.ಡಿ.ಸಿ. ಅಧಿಕಾರಿ ಚಿಕ್ಕಮುತ್ತಯ್ಯ ವೇದಿಕೆಯಲ್ಲಿದ್ದರು.  ಖಾಲಿದ್ ಟಿ.ಎಂ., ಶಹೀದ್ ಪಾರೆ, ಗಣೇಶ್ ನಾಗಪಟ್ಟಣ, ಶಿಯಾಬ್ ಕೇರ್ಪಳ , ಇಬ್ರಾಹಿಂ ಕೆ.ಬಿ. ಇದ್ದರು.

ಪತ್ರಕರ್ತ ಸಂಘದ ಶರೀಫ್ ಜಟ್ಟಿಪಳ್ಳ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಣ ಸಂಯೋಜಕ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಆಶಾ ಅಂಬೆಕಲ್ಲು ಸನ್ಮಾನಿತರನ್ನು ಪರಿಚಯಿಸಿದರು.
ಮಲೆನಾಡು ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸಿದ್ದೀಕ್ ಕೊಕ್ಕೊ ಸಹಕರಿಸಿದರು.