ಸಂಪಾಜೆ : ಪ್ರಶಸ್ತಿ ವಿತರಣಾ ಕಾರ್ಯಕ್ರಮ

0

 

ಸಂಪಾಜೆ ಗ್ರಾಮದ ಕಲ್ಲುಗುಂಡಿ ಆರ್. ಎಮ್. ಎಸ್. ಎ. ಪ್ರೌಢಶಾಲೆಯಲ್ಲಿ ಸುಳ್ಯ ತಾಲೂಕು ಮಟ್ಟದ 10 ಪ್ರೌಢಶಾಲೆಗಳ ರಾಷ್ಟ್ರೀಯ ಜನ ಸಂಖ್ಯಾ ಕಾರ್ಯಕ್ರಮದ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಪ್ರಶಸ್ತಿ ವಿತರಣೆ ಮಾಡಿದರು.

 

ಸಮಾರಂಭದ ಅತಿಥಿಗಳಾದ ಪ್ರಕಾಶ್ ಮೂಡಿತ್ತಾಯ ರವರು ಬದಲಾದ ಶಿಕ್ಷಣ ವೆವಸ್ಥೆ. ಶಿಕ್ಷಕರ ಪಾತ್ರ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬಗ್ಗೆ ಮಾತನಾಡಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ ಮಾಡಿದರು. ಕಾರ್ಯಕ್ರಮ ದಲ್ಲಿ ಪ್ರೌಢಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಹೊನ್ನಪ್ಪ ಆಚಾರ್ಯ, ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಮಧುಸೂದನ್, ಬಿ. ಆರ್. ಸಿ. ರಮ್ಯಾ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಯಶ್ರೀ ಎಮ್. ಕೆ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಾವತಿ ,ಮಹೇಶ್, ರವಿಕುಮಾರ್ ಬಿಳಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಸ್ಪರ್ಧೆ ವಿಜೇತ ರಾಗಿ ರೋಲ್ ಪ್ಲೇ ಯಲ್ಲಿ ಪ್ರಥಮ ಸ್ಥಾನ ಜೂನಿಯರ್ ಕಾಲೇಜ್ ಸುಳ್ಯ, ದ್ವಿತೀಯ ಕೆ. ಪಿ. ಎಸ್. ಬೆಳ್ಳಾರೆ, ತೃತೀಯ ಐವರ್ನಾಡ್ ಪ್ರೌಢಶಾಲೆ ಹಾಗೂ ಜಾನಪದ ನೃತ್ಯ ವಿಭಾಗದಲ್ಲಿ ಪ್ರಥಮ ಜೂನಿಯರ್ ಕಾಲೇಜ್ ಸುಳ್ಯ ದ್ವಿತೀಯ ಕೆ. ಪಿ. ಎಸ್ ಬೆಳ್ಳಾರೆ ತೃತಿಯ ಮರ್ಕಂಜ ಪ್ರೌಢಶಾಲೆ ಪಡೆಯಿತು. ವಿಷ್ಣು ಪ್ರಕಾಶ್ ನಾರ್ಕೋಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.